ಚೈತ್ರಾ ಕುಂದಾಪುರ ಬಂಧನದ ಬೆನ್ನಿಗೆ ಆಶ್ರಯ ನೀಡಿದ್ದ ಕಾಂಗ್ರೆಸ್ ವಕ್ತಾರೆಗೂ ಸಿಸಿಬಿ ನೊಟೀಸ್ | ಕಾಶ್ಮೀರದಲ್ಲಿದ್ದಾನೆಂದು ನಂಬಿಸಿ ಸುರೆಯ್ಯ ಅಂಜುಮ್ ಜಸೀಮ್ ಮನೆಯಲ್ಲಿ 7 ದಿನಗಳಿಂದ ಆಶ್ರಯ ಪಡೆದಿದ್ದ ಚೈತ್ರಾ!

ಉಡುಪಿ: ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಗೆ ಕೊಡಿಸುವುದಾಗಿ 7 ಕೋಟಿ ರೂ. ಡೀಲ್ ಪ್ರಕರಣದಲ್ಲಿ ಹಿಂದೂ ಮುಖಂಡೆ ಚೈತ್ರಾ ಕುಂದಾಪುರ ಅವರನ್ನು ವಶಕ್ಕೆ ಪಡೆದ ಬೆನ್ನಿಗೇ ಆಶ್ರಯ ನೀಡಿದ್ದ ಕಾಂಗ್ರೆಸ್‌ ನ ಮಾಧ್ಯಮ ವಕ್ತಾರೆ ಸುರೆಯ್ಯ ಅಂಜುಮ್ ಜಸೀಮ್ ಅವರಿಗೂ ಸಿಸಿಬಿ ನೊಟೀಸ್ ನೀಡಿದೆ.

ಕಾಂಗ್ರೆಸ್ ಮಹಿಳಾ ನಾಯಕಿ ಸುರೆಯ್ಯ ಅಂಜುಂಗೆ ಸಿಸಿಬಿ ನೋಟೀಸ್ ನೀಡಿದ್ದು, ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.

ಕಳೆದ ಏಳು ದಿನಗಳಿಂದ ತಲೆಮರೆಸಿಕೊಂಡಿದ್ದ ಚೈತ್ರಾ ಕುಂದಾಪುರ ಕಾಂಗ್ರೆಸ್ ಮಾಧ್ಯಮ ವಕ್ತಾರೆಯ ಮನೆಯಲ್ಲಿ ಅವಿತು ಕುಳಿತಿದ್ದರು ಎನ್ನಲಾಗಿದೆ. ಈ ನಡುವೆ ಕಾಶ್ಮೀರದಲ್ಲಿದ್ದೇನೆ ಎಂದು ನಂಬಿಸುವಲ್ಲಿಯೂ ಅವರು ಯಶಸ್ವಿಯಾಗಿದ್ದರು ಎಂದು ಹೇಳಲಾಗಿದೆ.



































 
 

ಆದರೆ ಚೈತ್ರಾ ಕುಂದಾಪುರ ಅವರ ಸುಳಿವನ್ನು ಪತ್ತೆ ಹಚ್ಚಿದ ಪೊಲೀಸರು, ಚೈತ್ರಾ ಕುಂದಾಪುರ ಸಹಿತ ಚಿಕ್ಕಮಗಳೂರು ಬಿಜೆಪಿ ಯುವ ಮೋರ್ಚಾದ ಮುಖಂಡ ಸಹಿತ ನಾಲ್ವರನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top