ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿ ನಡೆಯಲು ಅಸಾಧ್ಯವಾಗಿರುವ ವಾಸು ಸಫಲ್ಯ, ಪೂವಕ್ಕ, ಇಬ್ರಾಹಿಂ ಅವರಿಗೆ ವೀಲ್ ಚೇರ್ ಹಾಗೂ ಮೋನಪ್ಪ ಗೌಡರಿಗೆ ವಾಟರ್ ಬೆಡ್ ವಿತರಣೆ ಮಾಡಲಾಯಿತು.


ಈ ಸಂದರ್ಭದಲ್ಲಿ ವಲಯಾಧ್ಯಕ್ಷ ಮಾಧವ ರೈ ಕುಂಬ್ರ, ವಲಯ ಮೇಲ್ವಿಚಾರಕಿ ಮೋಹಿನಿ ಎಸ್ ಗೌಡ, ಒಕ್ಕೂಟ ಅಧ್ಯಕ್ಷ ಸಂದೀಪ್ ಅರ್ಯಾಪು, ಸೇವಾಪ್ರತಿನಿಧಿ ನಳಿನಾಕ್ಷಿ, ಒಕ್ಕೂಟದ ಪದಾಧಿಕಾರಿಗಳಾದ ರವಿಕಲ, ಚಂದ್ರ ಯಸ್. ಮೋಹನ್. ಶೀನಪ್ಪ ಭಾಗವಹಿಸಿದ್ದರು.