ಹಾಲು ಸಾಗಾಟದ ಟ್ಯಾಂಕರ್ ಪಲ್ಟಿ : ಚಾಲಕನಿಗೆ ಗಾಯ 

ಕಡಬ  : ಹಾಲು ಸಾಗಾಟದ ಟ್ಯಾಂಕರ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಗಾಯಗೊಂಡ ಘಟನೆ ಪಡ್ಪಿನಂಗಡಿಯಿಂದ ವರದಿಯಾಗಿದೆ.

ಎಡಮಂಗಲ, ಏನೆಕಲ್ಲು, ಪಂಜ  ಹಾಲು ಉತ್ಪಾದಕರ ಸಹಕಾರ ಸಂಘಗಳ ಬಿ.ಎಂ.ಸಿ.ಯಿಂದ ಹಾಲು ಶೇಖರಿಸಿ ಸಾಗಾಟ ಮಾಡುತ್ತಿದ್ದ ನಂದಿನಿ ಹಾಲಿನ ಟ್ಯಾಂಕರ್ ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯ ಪಡ್ಪಿನಂಗಡಿಯಲ್ಲಿ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದೆ.

ಘಟನೆಯಿಂದ ಚಾಲಕನಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಟ್ಯಾಂಕರಿನಲ್ಲಿರುವ ಹಾಲು ಸುರಕ್ಷಿತವಾಗಿರುವುದಾಗಿ ತಿಳಿದು ಬಂದಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top