3 ದಿನದಿಂದ 40 ಅಡಿ ಆಳದ ಬಾವಿಯಲ್ಲಿದ್ದ ಹೋರಿಯ ರಕ್ಷಣೆ | ಅಗ್ನಿಶಾಮಕ ದಳದಿಂದ ಯಶಸ್ವಿ ಕಾರ್ಯಾಚರಣೆ

ಸುಬ್ರಹ್ಮಣ್ಯ : ಕಳೆದ 3 ದಿನಗಳ ಹಿಂದೆ ಬಾವಿಗೆ ಬಿದ್ದಿದ್ದ ಹೋರಿಯನ್ನು ಅಗ್ನಿಶಾಮಕ ದಳ ರಕ್ಷಿಸಿದ ಘಟನೆ ಸುಬ್ರಹ್ಮಣ್ಯದ ದೇವರಗದ್ದೆ ಬಳಿ ನಡೆದಿದೆ.

ದೇವರಗದ್ದೆ ನಿವಾಸಿ ವಿಠಲ ಶೆಟ್ಟಿ ಎಂಬವರ 40 ಅಡಿಯ ಬಾವಿಗೆ ಹೋರಿ ಬಿದ್ದಿತ್ತು. ಗಮನಕ್ಕೆ ಬಂದ ತಕ್ಷಣ ಸ್ಥಳೀಯರ ಸಹಾಯದಿಂದ ಮೇಲಕ್ಕೆತ್ತಲು ಪ್ರಯತ್ನ ನಡೆಸಲಾಗಿತ್ತು. ಆದರೆ ಪ್ರಯೋಜನವಾಗಿರಲಿಲ್ಲ. ಸೆ. 10ರಂದು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಹೋರಿಯನ್ನು ರಕ್ಷಿಸಿದ್ದಾರೆ.

ಸಮಾಜ ಸೇವಕ ರವಿ ಕಕ್ಕೆಪದವು ಅವರು ಸುಬ್ರಹ್ಮಣ್ಯ ಪಿ.ಎಸ್.ಐ. ಅವರಿಗೆ ಮಾಹಿತಿ ನೀಡಿದ್ದರು. ಬಳಿಕ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿದ್ದರು. ಸ್ಥಳೀಯರ ಸಹಕಾರ ಪಡೆದುಕೊಂಡ ಅಗ್ನಿಶಾಮಕ ಸಿಬ್ಬಂದಿ ಹೋರಿಯನ್ನು ರಕ್ಷಿಸಿದ್ದಾರೆ.



































 
 

ಸ್ಥಳೀಯರಾದ ಹರೀಶ್ ಇಂಜಾಡಿ, ರವಿ ಕಕ್ಕೆಪದವು, ಕಾರ್ತಿಕ್, ಲತೀಶ್, ರಂಜನ್, ಅಶ್ವಥ್, ಜಯೇಶ್ ಮೊದಲಾದವರು ಸಹಕರಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top