ಸವಣೂರು : ಪುತ್ತೂರು ಶ್ರೀ ಸತ್ಯಸಾಯಿ ಸೇವಾ ಸಮಿತಿ ಹಾಗೂ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಭಗವಾನ್ ಶ್ರೀಸತ್ಯಸಾಯಿ ಬಾಬಾರವರ ದಿವ್ಯ ಅನುಗ್ರಹದೊಂದಿಗೆ ವಿದ್ಯಾರಶ್ಮಿ ಪದವಿ ಕಾಲೇಜಿನ ವಿದ್ಯಾಸಿಂಚನ ಸಭಾಂಗಣದಲ್ಲಿ ಎರಡು ದಿನಗಳ ಆಧ್ಯಾತ್ಮಿಕ ಶಿಕ್ಷಣ ಶಿಬಿರ ನಡೆಯಿತು.
ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ವೈಯಕ್ತಿಕ ಬೆಳವಣಿಗೆಗೆ ಆಧ್ಯಾತ್ಮಿಕ ಶಿಕ್ಷಣವು ಪೂರಕವಾದದ್ದು ಇದು ನಮ್ಮನ್ನು ಸನ್ಮಾರ್ಗದ ಕಡೆಗೆ ಕೊಂಡೊಯ್ಯುತ್ತದೆ ಎಂದರು.
ಸತ್ಯಸಾಯಿ ಸೇವಾ ಸಂಸ್ಥೆಗಳ ಜಿಲ್ಲಾ ಶೈಕ್ಷಣಿಕ ಸಂಯೋಜಕಿ ಮೂಕಾಂಬಿಕಾ ಎನ್.ರಾವ್, ಕರ್ನಾಟಕ ಇದರ ರಾಜ್ಯ ಎಜ್ಯುಕೇರ್ ಸಂಯೋಜಕ ಜಗನ್ನಾಥ ನಾಡಿಗೇರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಸ್ವಾಗತಿಸಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ ಕೆ. ವಂದಿಸಿದರು.
ಆಧ್ಯಾತ್ಮಿಕ ಶಿಕ್ಷಣ ಶಿಬಿರ :
ಬಳಿಕ ಆಧ್ಯಾತ್ಮಿಕ ಶಿಕ್ಷಣ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿ ಕರ್ನಾಟಕ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಎಜ್ಯುಕೇರ್ ಸಂಯೋಜಕ ಜಗನ್ನಾಥ್ ನಾಡಿಗೇರ್ “ಮೌಲ್ಯಾಧಾರಿತ ಸಮಾಜ ಮತ್ತು ಸತ್ಯಸಾಯಿ ಪ್ರೇರಣ”, ಮಂಗಳೂರು ಎಸ್.ಡಿ.ಎಂ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಸಂತೋಷ್ ಪ್ರಭು “ವಿದ್ಯಾರ್ಥಿ ಜೀವನದಲ್ಲಿ ಆಧ್ಯಾತ್ಮಿಕತೆ, ಸಂಸ್ಕೃತ ವಿಧ್ವಾಂಸ ವಿಘ್ನಷ್ ಮಾನವ ಜನ್ಮ ಭಾರತೀಯರ ಮೂಲ ಚಿಂತನೆ”, ಪುತ್ತೂರು ಸುದಾನ ಪ್ರೌಢಶಾಲೆ ಶಿಕ್ಷಕಿ ಕವಿತಾ ಅಡೂರು “ಬಾಳಿಗೊಂದು ನಂಬಿಕೆ”, ಎ ಕೃಷ್ಣಪ್ಪ ಪೂಜಾರಿ “ರಾಮಾಯಣ”, ಸಂತಫಿಲೋಮಿನಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಸುಬೇರ್ “ಕುರಾನ್ ಸಂದೇಶ”, ಬೆಳ್ತಂಗಡಿ ನಿವೃತ್ತ ಪ್ರಾಂಶುಪಾಲ ಪ್ರೊ.ಎ ಕೃಷ್ಣಪ್ಪ ಪೂಜಾರಿ “ರಾಮಾಯಣದ ಆದರ್ಶಗಳು”, ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಅಶೋಕ ರಯಾನ್ ಕ್ರಾಸ್ತಾ “ಸಹಬಾಳ್ವೆಯ ಸಮಾಜಕ್ಕೆ ಕ್ರೈಸ್ತ ತತ್ವಗಳು”, ಶ್ರೀ.ಸತ್ಯಸಾಯಿ ಸೇವಾ ಸಂಸ್ಥೆಗಳು ಕರ್ನಾಟಕ ಇದರ ರಾಜ್ಯ ಶೈಕ್ಷಣಿಕ ಸಂಯೋಜಕ ಸುರೇಶ್ ಶೆಟ್ಟಿ “ಸರ್ವಧರ್ಮ ಸಮನ್ವಯ” ದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಚೈತ್ರಿಕಾ ಅಜಯರಾಮ್ ಕೋಡಿಬೈಲು ಅವರಿಂದ ಸುಗಮ ಸಂಗೀತ ನಡೆಯಿತು.