ಪುತ್ತೂರು: ತೀಯಾ ಸಮಾಜ ಸೇವಾ ಸಮಿತಿ ಪುತ್ತೂರು ಹಾಗೂ ತೀಯಾ ಸಮಾಜ ಸೇವಾ ಸಮಿತಿ ಎಣ್ಮೂರು ನಿಂತಿಕಲ್ಲು ಇದರ ಆಶ್ರಯದಲ್ಲಿ ಪುತ್ತೂರಿನ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್‌ನಲ್ಲಿ ರಕ್ತದಾನ ಶಿಬಿರ ಹಾಗೂ ನೇತ್ರದಾನ ಶಿಬಿರ ನಡೆಯಿತು.
ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್‌ನ ವೈದ್ಯಾಧಿಕಾರಿ ಡಾ.ರಾಮಚಂದ್ರ ಭಟ್ ಅವರು ಉದ್ಘಾಟಿಸಿ ಮಾತನಾಡಿ, ರಕ್ತದಾನ ಪುಣ್ಯ ಕಾರ್ಯ. 5 ತಾಲೂಕಿಗೆ ಪುತ್ತೂರು ಬ್ಲಡ್ ಸೆಂಟರ್‌ನಿಂದ ರಕ್ತ ಪೂರೈಕೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸ್ವಯಂಪ್ರೇರಿತವಾಗಿ ಎಲ್ಲರೂ ರಕ್ತದಾನ ಮಾಡಬೇಕು. ವರ್ಷದ 365 ದಿನಗಳಲ್ಲೂ ಈ ಬ್ಲಡ್ ಸೆಂಟರ್ ಕಾರ್ಯಾಚರಿಸುತ್ತಿದೆ ಎಂದರು.
ಪುತ್ತೂರು ತಾಲೂಕು ತೀಯಾ ಸಮಾಜದ ಅಧ್ಯಕ್ಷ ಗೋಪಾಲಕೃಷ್ಣ ನೆಹರುನಗರ ಮಾತನಾಡಿ, ರಕ್ತದಾನ ಪುಣ್ಯದ ಕೆಲಸ. ಒಬ್ಬರ ಜೀವ ಉಳಿಸಿದ ಸಾರ್ಥಕತೆ ರಕ್ತದಾನ ಮಾಡುವುದರಿಂದ ದೊರಕುತ್ತದೆ ಎಂದರು.
ಪುತ್ತೂರು ತಾಲೂಕು ತೀಯಾ ಸಮಾಜದ ಗೌರವಾಧ್ಯಕ್ಷ ನಾರಾಯಣ ಉಪಸ್ಥಿತರಿದ್ದರು. ವೀಣಾ ಮತ್ತು ಗುಲಾಬಿ ಪ್ರಾರ್ಥಿಸಿದರು. ಪುರುಷೋತ್ತಮ ಪುತ್ತೂರು ಸ್ವಾಗತಿಸಿ, ವಂದಿಸಿದರು.