ಪುತ್ತೂರು: ನಿಮ್ಮ ಊರಿನ ಕಾಮಗಾರಿಗೆ ಸರಕಾರದಿಂದ ಅನುದಾನ ಬಂದಿದ್ದರೆ ಅದು ನಿಮ್ಮದೇ ಹಣ. ನೀವು ಕಟ್ಟಿದ ಟ್ಯಾಕ್ಸ್ ಸೇರಿದಂತೆ ವಿವಿಧ ಮೂಲಗಳಿಂದ ನಿಮ್ಮಿಂದಲೇ ಸಂಗ್ರಹಿಸಿದ ಹಣವನ್ನು ಯಾವುದೇ ಕಾಮಗಾರಿಗೆ ಬಳಕೆ ಮಾಡುತ್ತಾರೆ. ಯಾವ ಜನಪ್ರತಿನಿಧಿಯೂ ಸ್ವಂತ ಹಣವನ್ನು ಕಾಮಗಾರಿಗೆ ನೀಡುತ್ತಿಲ್ಲ, ನೀಡುವುದೂ ಇಲ್ಲ ಎಂದು ಶಾಸಕ ಅಶೋಕ್ ರೈ ಹೇಳಿದರು.
ಶಾಂತಿಗೋಡು ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ವಿವೇಕ ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿಮ್ಮ ಊರಿನ ಬೇಡಿಕೆ, ಸಮಸ್ಯೆಗಳು ಏನೆಂಬುದು ನಿಮಗೆ ಗೊತ್ತಿರುತ್ತದೆ. ಸಾರ್ವಜನಿಕರು ಬೇಡಿಕೆ ಮತ್ತು ಸಮಸ್ಯೆಗಳನ್ನು ಶಾಸಕರ ಬಳಿ ಹೇಳಿಕೊಂಡಲ್ಲಿ ಅದಕ್ಕೆ ನಾನು ಅನುದಾನವನ್ನು ಇಡುತ್ತೇನೆ. ಆ ಅನುದಾನದ ಹಣ ನಿಮ್ಮದೇ ಹಣವಾಗಿದೆ ಎಂದು ಶಾಸಕರು ಹೇಳಿದರು.
ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಹರಿಣಾಕ್ಷಿ, ಸದಸ್ಯ ಹೊನ್ನಪ್ಪ ಕೈಂದಾಡಿ, ಸಿ.ಆರ್.ಪಿ ಪರಮೇಶ್ವರಿ, ಎಸ್ಡಿಎಂಸಿ ಉಪಾಧ್ಯಕ್ಷ ನಾಗೇಶ್, ಮುಖ್ಯ ಶಿಕ್ಷಕಿ ಸವಿತಾ ಕುಮಾರಿ ಉಪಸ್ಥಿತರಿದ್ದರು. ಎಸ್ಡಿಎಂಸಿ ಅಧ್ಯಕ್ಷ ಯೋಗೀಶ್ ಪಿ. ನಾಯ್ಕ್ ಸ್ವಾಗತಿಸಿದರು. ಶಿಕ್ಷಕಿ ಲೀಲಾವತಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.