ಬೆಂಗಳೂರು: ನಮ್ಮ ನಾಡನ್ನು ಆಳುವವರು ನಾಸ್ತಿಕನಾದರೂ ಪ್ರಜೆಗಳ ಆಸ್ತಿಕತೆ ಗೌರವಿಸಬೇಕು. ಯಾವುದೇ ವ್ಯಕ್ತಿಯನ್ನು ಬಲವಂತವಾಗಿ ಬೇರೊಂದು ಧರ್ಮಕ್ಕೆ ಸೆಳೆಯಲು ಸಾಧ್ಯವಿಲ್ಲ ಎಂದು ಶ್ರೀ ಆದಿಚುಂಚನಗಿರಿ ಮಠದ ಶ್ರೀ ಡಾ.ನಿರ್ಮಲಾನಂದನಾಥ ಶ್ರೀಗಳು ಹೇಳಿದ್ದಾರೆ.
ಪತ್ರಿಕಾ ಹೇಳೀಕೆ ನೀಡಿರುವ ಅವರು, ಮೈಸೂರು: ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಸಿಡಿದೆದ್ದಿದ್ದಾರೆ.
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ. ಅಂತಾ ಆದಿಚುಂಚನಗಿರಿ ಶ್ರೀಗಳು ಮಹಾಭಾರತದ ಸಂದೇಶ ಉಲ್ಲೇಖಿಸಿದ್ದಾರೆ. ಸನಾತನ ಪದಕ್ಕೆ ಶಾಶ್ವತ ಎನ್ನುವ ಅರ್ಥವಿದೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಜಾಗೃತವಾಗಿರಬೇಕು. ಬಳಸುವ ಪದಗಳ ಬಗ್ಗೆ ನಿಗಾ ಇರಬೇಕೆಂದು ಶ್ರೀಗಳು ಕಿಡಿಕಾರಿದರು.