ಪುತ್ತೂರು : ಪ್ರಧಾನಮಂತ್ರಿ ಸ್ವ-ನಿಧಿ ಯೋಜನೆಯಡಿ ಬೀದಿ ಬದಿಯ ವ್ಯಾಪಾರಕ್ಕೆ ಪ್ರಥಮ ಹಂತದ ಕಿರುಸಾಲ ಪಡೆದ ಫಲಾನುಭವಿಗಳಿಗೆ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸುವ ಕುರಿತು, ಇದರಿಂದ ದೊರೆಯುವ 8 ಕಲ್ಯಾಣ ಯೋಜನೆಗಳ ಸೌಲಭ್ಯಗಳ ಬಗ್ಗೆ ತರಭೇತಿ ಕಾರ್ಯಕ್ರಮ ಶುಕ್ರವಾರ ನಗರಸಭೆ ಸಭಾಭವನದಲ್ಲಿ ನಡೆಯಿತು.

ಪೌರಾಯುಕ್ತ ಮಧು ಎಸ್. ಮನೋಹರ್ ಗಿಡಕ್ಕೆ ನೀರೆರೆಯುವ ಮೂಲಕ ತರಭೇತಿಗೆ ಚಾಲನೆ ನೀಡಿ, ಪಿ.ಎಂ.ಸ್ವ-ನಿಧಿಯ ಸೌಲಭ್ಯವನ್ನು ಪಡೆಯುವ ವಿಧಾನದ ಬಗ್ಗೆ ವಿವರಿಸಿದರು.
ಕೆನರಾ ಬ್ಯಾಂಕ್ ನ ಅರುಣ್, ಉತ್ತಮ್, ವನಜಾ ಪ್ರಸಾದ್ ಮತ್ತು ಬ್ಯಾಂಕಿನ ಕಾವ್ಯ, ಆಶಾ, ರಮಣ್ ಕುಮಾರ್ ರವರು ಪ್ರಧಾನ ಮಂತ್ರಿ ಭಿಮಾ ಯೋಜನೆ ಹಾಗೂ ಇತರೇ ಯೋಜನೆಗಳ ಬಗ್ಗೆ ಮತ್ತು ಡಿಜಿಟಲ್ ವ್ಯವಹಾರದ ಮಹತ್ವ ಹಾಗೂ ಕ್ಯೂ ಆರ್ ಕೋಡ್ ಬಳಕೆ ಬಗ್ಗೆ ಮಾಹಿತಿ ನೀಡಿದರು. ಫಲಾನುಭವಿಗಳಿಗೆ ಬ್ಯಾಂಕಿನ ಪ್ರತಿನಿಧಿಗಳು ಸಾಂಕೆತಿಕವಾಗಿ ಕ್ಯೂಆರ್ ಕೋಡ್ ವಿತರಿಸಿದರು.
ಸಮುದಾಯ ಸಂಘಟನಾಧಿಕಾರಿ ಕರುಣಾಕರ ವಿ. ರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಯಲಕ್ಷ್ಮಿ ಬೇಕಲ್ ವಂದಿಸಿದರು. ರಮಣಿ, ಧನ್ಯಶ್ರೀ, ಮಮತ, ತಾರಾ, ಸಂತೋಷ್ ಸಹಕರಿಸಿದರು.