ರಾಯಚೂರಿನ ಹಿರಿಯ ಪತ್ರಕರ್ತ ಕೆ.ಎನ್.ರೆಡ್ಡಿ ಆತ್ಮಹತ್ಯೆ | ಸಾಲ ಬಾಧೆಯಿಂದ ಮನನೊಂದು ಆತ್ಮಹತ್ಯೆ ಶಂಕೆ !

ರಾಯಚೂರು : ಹಿರಿಯ ಪತ್ರಕರ್ತರೊಬ್ಬರು ಕಟ್ಟಡದ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರುಗಿಯಲ್ಲಿ ನಡೆದಿದೆ.

ರಾಯಚೂರಿನ ಕಲ್ಲೂರು ಗ್ರಾಮದ ಕೆ.ಎನ್.ರೆಡ್ಡಿ (57) ಈ ಕೃತ್ಯ ಎಸಗಿದವರು.

ಹಲವು ವರ್ಷಗಳಿಂದ ಕಲಬುರಗಿ ನಗರದ ದರಿಯಾಪುರದಲ್ಲಿ ಪತ್ನಿ ಹಾಗೂ ಪುತ್ರಿ ಜತೆ ವಾಸವಾಗಿದ್ದರು. ಸಾಲದ ಹೊರೆ ಮತ್ತು ಕೌಟುಂಬಿಕ ಕಲಹಕ್ಕೆ ಬೇಸತ್ತು ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.



































 
 

ರೆಡ್ಡಿ ಅವರು ಡೆಕ್ಕನ್ ಹೆರಾಲ್ಡ್ ಸೇರಿದಂತೆ ವಿವಿಧ ಆಂಗ್ಲ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ್ದರು. ಅಲ್ಲದೆ ಜೆಸ್ಕಾಂನ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿದ್ದರು. ಪೊಲೀಸ್ ಕಮಿಷನರ್ ಕಲಬುರಗಿ ಚೇತನ್ ಆರ್. ಪ್ರಕರಣದ ತನಿಖೆಯನ್ನು ಎಲ್ಲಾ ಆಯಾಮಗಳಲ್ಲಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಏಳು ವರ್ಗಗಳ ಹಿಂದೆ ರಾಯಚೂರಿನಲ್ಲಿ ಶಾಲೆಯೊಂದನ್ನು ಆರಂಭಿಸಿದ್ದರು. ಬಳಿಕದ ಕೋವಿಡ್ ದಿನಗಳಲ್ಲಿ ಶಾಲೆ ಸರಿಯಾಗಿ ನಡೆಯದೇ ಸಾಲದ ಹೊರೆ ಹೆಚ್ಚಾಗಿತ್ತು. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top