ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ | ನ.17 ರ ವರೆಗೆ ಕಾಲಾವಕಾಶ

ಬೆಂಗಳೂರು : ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ (HSRP) ಅಳವಡಿಕೆ ಮಾಡಲು ಸಾರಿಗೆ ಇಲಾಖೆ ನವೆಂಬರ್ 17ರ ವರೆಗೆ ಕಾಲಾವಕಾಶ ನೀಡಿ ಆದೇಶ ಹೊರಡಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಂಡಳಿಯ ಸದಸ್ಯ ಡಾ.ಕಮಲ್ಜೀತ್ ಸೋಯಿ ಅವರು, ಸುರಕ್ಷತೆಯ ದೃಷ್ಟಿಯಿಂದ ಇದನ್ನು ಅಳವಡಿಕೆ ಮಾಡುವುದು ಕಡ್ಡಾಯವಾಗಿದೆ ಎಂದಿದ್ದಾರೆ.

ದೇಶದಲ್ಲಿ ಸುಮಾರು 34 ಕೋಟಿಗೂ ಹೆಚ್ವು ನಕಲಿ ನಂಬರ್ ಪ್ಲೇಟ್ ಅಳವಡಿಸಿದ ವಾಹನಗಳು ಓಡಾಡುತ್ತಿದೆ. ಇದರಿಂದ ದೇಶದಲ್ಲಿ ಶೇ.99 ಅಪಘಾತಗಳು ನಡೆಯುತ್ತಿದೆ. ದೇಶದಲ್ಲಿ ಒಟ್ಟು 18 ರಾಜ್ಯಗಳಲ್ಲಿ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್‍ಗಳನ್ನು ಅಳವಡಿಕೆ ಮಾಡಿಕೊಳ್ಳಲಾಗಿದೆ. ಉಳಿದ ರಾಜ್ಯಗಳು ಅಳವಡಿಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆ.































 
 

ಅಧಿಕೃತವಾಗಿಲ್ಲದ ವಾಹನಗಳು ರಸ್ತೆಗಳಲ್ಲಿ ಓಡಾಡುವುದನ್ನು ಪತ್ತೆ ಹಚ್ಚಲು, ಅಪಘಾತವಾದ ವೇಳೆ ಹಿಟ್ ಆಂಡ್‌ ರನ್ ಕೇಸ್‌ನ್ನು ಭೇದಿಸಲು ಈ ನಂಬರ್ ಪ್ಲೇಟ್ ಸಹಾಯವಾಗಲಿದೆ ಎಂದರು.

ಮಾಧ್ಯಮಗಳು ಈ ನಂಬರ್ ಪ್ಲೇಟ್ ಬಗ್ಗೆ ಹೆಚ್ಚು ಪ್ರಚಾರ ಮಾಡುವ ಮೂಲಕ ಜನರಿಗೆ ಅರಿವು ಮೂಡಿಸಬೇಕು. ನಂಬರ್ ಪ್ಲೇಟ್ ಖರೀದಿಸಲು ₹400 ರನ್ನು ಕೇಂದ್ರ ಸರಕಾರವು ನಿಗದಿ ಮಾಡಿದೆ. https://www.siam.in/ ಜಾಲತಾಣದಲ್ಲಿ ನಂಬರ್ ಪ್ಲೇಟ್ ನೋಂದಣಿಗೆ ಅರ್ಜಿ ಸಲ್ಲಿಸಬೇಕು ಎಂದು ಅವರು ಹೇಳಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top