ಪುತ್ತೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಜಲ ಮಾಲಿನ್ಯ ( ನಿವಾರಣೆ ಮತ್ತು ನಿಯಂತ್ರಣ ) ಕಾಯಿದೆ 1974ರ ಕಲಂ 33 ಅ ರಂತೆ ಪ್ರದತ್ತವಾದ ಅಧಿಕಾರ ಚಲಾಯಿಸಿ, ಪ್ಲಾಸ್ಟರ್ ಓಫ್ ಪ್ಯಾರಿಸ್ ನಿಂದ ತಯಾರಿಸಿರುವ ಹಾಗೂ ಬಣ್ಣ ಲೇಪಿತ ಗೌರಿ -ಗಣೇಶ ವಿಗ್ರಹಗಳನ್ನು ರಾಜ್ಯದ ಕೆರೆ, ನದಿ, ಕಾಲುವೆ, ಬಾವಿ ಹಾಗೂ ಇತರ ಜಲಮೂಲಗಳಲ್ಲಿ ವಿಸರ್ಜನೆ ಮಾಡುವುದನ್ನು ನಿಷೇಧಿಸಿ ಅಧಿಸೂಚನೆಯನ್ನು ಹೋರಾಡಿಸಿರುತ್ತದೆ.
ಅದರಂತೆ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಮನೆಗಳಲ್ಲಿ, ಸಂಘ – ಸಂಸ್ಥೆಗಳ ವತಿಯಿಂದ ಗೌರಿಗಣೇಶ ಮೂರ್ತಿ ಇಟ್ಟು ಗಣೇಶೋತ್ಸವ ಆಚರಣೆ ಮಾಡುವ ಸಾರ್ವಜನಿಕರು ಮೂರ್ತಿಯನ್ನು ವಿಸರ್ಜನೆ ಮಾಡುವ ಸಂದರ್ಭ ನಗರಸಭೆ ನಿಗದಿಪಡಿಸಿದ ನೀರಿನ ಮೂಲಗಳಲ್ಲಿ ವಿಸರ್ಜನೆ ಮಾಡುವುದು.
ಬಣ್ಣ ರಹಿತ ಮಣ್ಣಿನ / ನೈಸರ್ಗಿಕ ಮೂರ್ತಿಗಳನ್ನು ಬಳಸುವುದು.
ವಿಸರ್ಜನೆ ಪೂರ್ವದಲ್ಲಿ ಹೂ, ಹಣ್ಣು, ಬಾಳೆ ಗಿಡ, ಇತ್ಯಾದಿ ಸಾಮಗ್ರಿಗಳನ್ನು ಪ್ರತ್ಯೇಕಿಸಿ ತ್ಯಾಜ್ಯ ಸಂಗ್ರಹಣೆ ವಾಹನಕ್ಕೆ ನೀಡುವುದು.
ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇದಿಸುವುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ನಗರಸಭಾ ಕಚೇರಿಯನ್ನು ಸಂಪರ್ಕಿಸುವಂತೆ ಪುತ್ತೂರು ನಗರಸಭೆ ಪೌರಾಯುಕ್ತರಾದ ಮಧು ಎಸ್. ಮನೋಹರ್ ವಿನಂತಿಸಿದ್ದಾರೆ.