ಪುತ್ತೂರು : ವ್ಯಕ್ತಿಯೋರ್ವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಬೆಟ್ಟಂಪಾಡಿ ಗ್ರಾಮದ ಅಂಗರಾಜೆ ಎಂಬಲ್ಲಿ ಮಂಗಳವಾರ ಪತ್ತೆಯಾಗಿದೆ.
ಬೆಟ್ಟಂಪಾಡಿ ಗ್ರಾಮದ ಅಂಗರಾಜೆ ಬಾಲ್ಯೊಟ್ಟು ಗುತ್ತು ಸಂಕಯ್ಯ ಆಳ್ವರವರ ಪುತ್ರ ರವೀಂದ್ರನಾಥ ಆಳ್ವ (55) ಈ ಕೃತ್ಯ ಎಸಗಿದವರು.
ರವೀಂದ್ರನಾಥ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಪತ್ನಿ ದೀಕ್ಷಾ ಹಾಗೂ ಮಕ್ಕಳಿಬ್ಬರು ಬೆದ್ರಾಳದಲ್ಲಿರುವ ತವರು ಮನೆಯಲ್ಲಿ ವಾಸಿಸುತ್ತಿದ್ದರು. ರವೀಂದ್ರನಾಥ ಆಳ್ವರು ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಪಕ್ಕದ ಸಹೋದರನ ಮನೆಯಲ್ಲಿ ಊಟ ಮಾಡುತ್ತಿದ್ದ ಅವರು, ಸೆ.3 ರಂದು ರಾತ್ರಿ ಎಂದಿನಂತೆ ಊಟಕ್ಕೆ ತೆರಳಿದ್ದ ಅವರು ತಾನು ಮನೆಯಲ್ಲಿ ಊಟ ಮಾಡುವುದಾಗಿ ಬುತ್ತಿಯಲ್ಲಿ ತೆಗೆದುಕೊಂಡು ಹೋದವರು ಎರಡು ದಿನಗಳಾದರೂ ಬಾರದ ಹಿನ್ನಲೆಯಲ್ಲಿ ಮಂಗಳವಾರ ಅವರ ಮನೆಗೆ ಹೋದಾಗ ಮನೆಯ ಛಾವಣಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.