ಪುತ್ತೂರು: ಭಾರತಾದ್ಯಂತ ಒಂದು ವಾರಗಳ ಕಾಲ ನಡೆಯುವ ‘ಜೇಸಿ ಸಪ್ತಾಹ’ದ ಅಂಗವಾಗಿ ಪುತ್ತೂರು ಜೆಸಿಐ ಸಂಸ್ಥೆಯ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಪುತ್ತೂರು ಜೆಸಿಐ ಸೆ. 9 ರಿಂದ 15ರ ತನಕ ‘ಜೆಸಿಐ ಸಪ್ತಾಹ’ ದ ಅಂಗವಾಗಿ ಸೆ.10 ಭಾನುವಾರ, ಅಪರಾಹ್ನ ಗಂಟೆ 2 ರಿಂದ ಇಳಿ ಸಂಜೆ ತನಕ ಪುತ್ತೂರು ಕ್ಲಬ್ ಆವರಣದಲ್ಲಿ ವಿಶೇಷ ತಳಿಗಳ ಶ್ವಾನ, ಬೆಕ್ಕು ಮೊದಲಾದ ‘ಸಾಕುಪ್ರಾಣಿ’ಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಪುತ್ತೂರು ಕ್ಲಬ್ ಅಧ್ಯಕ್ಷ ಡಾ. ದೀಪಕ್ ರೈ ಮತ್ತು ಜೆಸಿಐ ಅಧ್ಯಕ್ಷ ಸುಹಾಸ್ ಮರಿಕೆ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರದರ್ಶನದಲ್ಲಿ ವಿಶೇಷ ಗಮನ ಸೆಳೆದ ಸಾಕುಪ್ರಾಣಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣಿಪ್ರಿಯರು ತಂತಮ್ಮ ಮುದ್ದಿನ ಸಾಕುಪ್ರಾಣಿಗಳೊಂದಿಗೆ ಪ್ರದರ್ಶನದಲ್ಲಿ ಭಾಗವಹಿಸಬೇಕೆಂದು ಅವರು ವಿನಂತಿಸಿದ್ದಾರೆ.
`ಸಪ್ತಾಹದ ಕೊನೆ ದಿವಸ ಅಂದರೆ ಸೆ.15ರಂದು ಬೆಳಿಗ್ಗೆ 7 ಗಂಟೆಗೆ ಪುತ್ತೂರು ಫಿಲೋಮಿನಾ ಪ್ರೌಢ ಶಾಲೆಯ ವಠಾರದಲ್ಲಿ ಸಾರ್ವಜನಿಕರಿಗಾಗಿ ವಿಶೇಷ ವ್ಯಾಯಾಮಗಳನ್ನೊಳಗೊಂಡ ‘ಝುಂಬಾ ಡ್ಯಾನ್ಸ್ ನಡೆಯಲಿದೆ. ಸಪ್ತಾಹದ ಉಳಿದ ದಿವಸಗಳಲ್ಲಿ ಸೆ.9ರಂದು ಮೊಟ್ಟೆತ್ತಡ್ಕ ಸರಕಾರಿ ಶಾಲೆಯಲ್ಲಿ ಮಕ್ಕಳಿಗಾಗಿ ಉಚಿತ ಯೋಗ ತರಬೇತಿ ಮತ್ತು ಆರೋಗ್ಯ ತಪಾಸಣೆ, ಸೆ.11ರಂದು ದರ್ಭೆ ವೃತ್ತದಲ್ಲಿ ಗಿಡ ನೆಡುವ ಕಾರ್ಯಕ್ರಮ, ಸೆ.12ರಂದು ಕಿಡ್ನಿ ವೈಫಲ್ಯ ಹಾಗೂ ಆಶಕ್ತರಿಗೆ ನೆರವು, ಸೆ.13ರಂದು ನೀರುಳಿತಾಯದ ಅರಿವಿನ ಚಿತ್ತರ, ಸೆ.14ರಂದು ‘ವಿದ್ಯಾಭಿಯಾನ ಹೀಗೆ ವಿವಿಧ ವೈವಿಧ್ಯಗಳೊಂದಿಗೆ ಜೆಸಿ ಸಪ್ತಾಯ ಆಯೋಜನೆಗೊಂಡಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ನೀಡಲಾಗಿದೆ.
ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಈ ಪ್ರದರ್ಶನ ನಡೆಯುತ್ತಿದೆ. ಕೊರೋನಾ ಸಂದರ್ಭ ಸಾಕುಪ್ರಾಣಿಗಳನ್ನು ಬೀದಿಯಲ್ಲಿ ಬಿಡುವ ಪರಿಸ್ಥಿತಿ ಬಂದಿತ್ತು. ಹೀಗಾಗಬಾರದು. ಇಂತಹ ಸಾಕುಪ್ರಾಣಿಗಳನ್ನು ಸಾಕುವುದು ಹೇಗೆ? ಅವುಗಳಿಗೆ ಔಷಧ, ಆಹಾರ ಕೊಡುವುದರ ಬಗ್ಗೆ ಮೊದಲಾದ ಮಾಹಿತಿ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಜೆಸಿಐ ಸಪ್ತಾಹ ನಿರ್ದೇಶಕ ಮೋಹನ ಕೆ, ಜೆಸಿಐ ಪುತ್ತೂರು ಕಾರ್ಯದರ್ಶಿ ಕಾರ್ತಿಕ್ ಬಿ, ಪ್ರಯೋಜಕ ಪ್ರವೀಣ್ ರಾಜ್ ಉಪಸ್ಥಿತರಿದ್ದರು.