ವಿಟ್ಲ ಸರಕಾರಿ ಶಾಲಾ ಕಿಟಕಿಗೆ ಕಿಡಿಗೇಡಿಗಳಿಂದ ಹಾನಿ

ವಿಟ್ಲ : ಯಾರೋ ಕಿಡಿಗೇಡಿಗಳು ವಿಟ್ಲ ಸರಕಾರಿ ಪ್ರೌಢಶಾಲಾ ಕಿಟಕಿಗಳಿಗೆ ಹಾನಿ ಮಾಡಿದ ಘಟನೆ ನಡೆದಿದೆ.

ಸೋಮವಾರ ಬೆಳಿಗ್ಗೆ ಶಾಲಾ ಶಿಕ್ಷಕರು ಎಂದಿನಂತೆ ಶಾಲಾಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಭಾನುವಾರ ಶಾಲಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾಟ ಇದ್ದುದರಿಂದ ಪಂದ್ಯಾಟ ಮುಗಿದ ಬಳಿಕ ಗೋಡೆಗಳ ಮೇಲೆ ಅಶ್ಲೀಲ ಬರಹ ಬರೆದು, ಕಿಟಕಿಗಳಿಗೆ ಹಾನಿ ಮಾಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಬಂದು ತನಿಖೆ ನಡೆಸುತ್ತಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top