ದೆಹಲಿ : ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಶಿಕ್ಷಕನನ್ನು 14 ವರ್ಷದ ಬಾಲಕ ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.
28ರ ಹರೆಯದ ಶಿಕ್ಷಕ ಬಾಲಕನಿಗೆ ನಿತ್ಯ ನಿಂದನೆ ಮಾಡುತ್ತಿದ್ದು, ಹಲ್ಲೆ ಮಾಡಿ ವಿಡಿಯೋ ಕೂಡ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದೀಗ ಪ್ರಕರಣಕ್ಕೆ ಸಂಬಂಧಿಸಿ ಕೃತ್ಯ ನಡೆದ ಮೂರು ದಿನಗಳ ಬಳಿಕ ಕೊಲೆ ಆರೋಪಿ ವಿದ್ಯಾರ್ಥಿಗೆ ಬಂಧಿಸಲಾಗಿದೆ.
ಆಗಸ್ಟ್ 30 ರಂದು ಮಧ್ಯಾಹ್ನ 2.15 ರ ಸುಮಾರಿಗೆ ಜಾಮಿಯಾ ನಗರದ ಬಟ್ಲಾ ಹೌಸ್ನ ಎರಡನೇ ಮಹಡಿಯ ಕೊಠಡಿಯಲ್ಲಿ ರಕ್ತ ಚೆಲ್ಲಿದೆ ಎಂದು ಕರೆ ಬಂದಿತ್ತು. ಮನೆಯ ಬಾಗಿಲು ತೆರೆದಿತ್ತು. ಪೊಲೀಸ್ ತಂಡವು ತೆರಳಿ ನೋಡಿದಾಗ ಶಿಕ್ಷಕ ಕತ್ತಿನ ಮೇಲೆ ಆಳವಾದ ಗಾಯಗಳೊಂದಿಗೆ ನೆಲದ ಮೇಲೆ ಬಿದ್ದಿದ್ದರು ಎಂದು ಆಗ್ನೇಯ ದೆಹಲಿ ಡಿಸಿಪಿ ರಾಜೇಶ್ ಡಿಯೋ ಹೇಳಿದ್ದಾರೆ. ಈ ಕುರಿತು ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಶಿಕ್ಷಕನು ಬಾಲಕನ ಜೊತೆ ದೈಹಿಕ ಸಂಬಂಧ ಹೊಂದಿದ್ದ ಎಂದು ಹೇಳಲಾಗುತ್ತಿದೆ. ಎರಡು ತಿಂಗಳ ಮೊದಲು ಶಿಕ್ಷಕ ಬಾಲಕನಿಗೆ ಭೇಟಿಯಾಗಿದ್ದ ಆ ಬಳಿಕ ಹಲವು ಬಾರಿ ಬಾಲಕನಿಗೆ ಲೈಂಗಿಕವಾಗಿ ಬಳಸಿಕೊಳ್ಳಲಾಗಿದೆ ಎಂದು ಬಾಲಕ ಆರೋಪಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಇದಲ್ಲದೆ ಶಿಕ್ಷಕ ಬಾಲಕನ ಖಾಸಗಿ ವೀಡಿಯೋ ಚಿತ್ರೀಕರಿಸಿ ತನಗೆ ಸಹಕರಿಸದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ದಿನದಂದು, ತನ್ನ ಜಾಮಿಯಾ ನಗರದ ಮನೆಯಲ್ಲಿ ತನ್ನನ್ನು ಭೇಟಿಯಾಗಲು ಶಿಕ್ಷಕ ಬಾಲಕನಿಗೆ ಹೇಳಿದ್ದ, ಬಾಲಕ ಅದರಂತೆ ಹರಿತವಾದ ಆಯುಧದೊಂದಿಗೆ ಅಪಾರ್ಟ್ಮೆಂಟ್ಗೆ ತೆರಳಿ ಶಿಕ್ಷಕನ ಕತ್ತು ಸೀಳಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.