ಕಂಗೆಡಿಸುವ ಬರಗಾಲ, ನೈಸರ್ಗಿಕ ವಿಕೋಪ, ಪ್ರಳಯ ಸ್ವರೂಪಿ ಮಳೆ ಇವೆಲ್ಲದಕ್ಕೆ ಸೂರ್ಯನಿಗೂ ಸಂಬಂಧವಿದೆಯೇ | ಪರಿಹಾರವೇ ಸಾಧ್ಯವೇ | ಪರಿಹಾರ ಕಂಡುಕೊಳ್ಳಲು ಇಂದು ಪಿಎಸ್‍ಎಲ್‍ವಿ-ಸಿ57 ರಾಕೆಟ್ ಉಡಾವಣೆ

ಬೆಂಗಳೂರು : ಸುಡು ಬೇಸಿಗೆಯಲ್ಲಿ ಸೂರ್ಯನ ಅಹನೀಯ. ಕಂಗೆಡಿಸುವ ಬರಗಾಲ, ಬದುಕನ್ನೇ ಕಸಿಯುವ ನೈಸರ್ಗಿಕ ವಿಕೋಪ, ಪ್ರಳಯ ಸ್ವರೂಪಿ ಮಳೆ ಇವೆಲ್ಲದಕ್ಕೂ ಸೂರ್ಯನಿಗೂ ಸಂಬಂಧವಿದೆಯೇ, ಅದರಿಂದ ಪಾರಾಗುವುದು ಹೇಗೆ ?

ಇದಕ್ಕೆ ಪರಿಹಾರ ಕಂಡುಕೊಳ್ಳಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಎಲ್‍-1 ಅಂತರಿಕ್ಷ ವೀಕ್ಷಣಾಲಯವನ್ನು ಸೆ.2 ಶನಿವಾರ ಶ್ರೀಹರಿಕೋಟಾದಿಂದ ಪಿಎಸ್ಎಲ್‍ವಿ-ಸಿ 57 ರಾಕೆಟ್ ಮೂಲಕ ಉಡಾವಣೆ ಮಾಡಲಾಗುವುದು. ಇದಕ್ಕಾಗಿ ಕ್ಷಣಗಣನೆ ಆರಂಭಗೊಂಡಿದೆ.

ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿ, ರೋವರ್ ಕಾರ್ಯನಿರ್ವಹಿಸುತ್ತಿರುವ ಬೆನ್ನಲ್ಲೇ ಇಡೀ ದೇಶ ಆದಿತ್ಯ ಉಡಾವಣೆ ಬಗ್ಗೆ ಕಾತರದಿಂದ ಕುಳಿತಿದೆ.































 
 

ಶನಿವಾರವೇ ಆದಿತ್ಯ ಎಲ್‍-1 ನ್ನು ಕೆಳಸ್ತರದ ಭೂಕಕ್ಷೆಯೊಂದಕ್ಕೆ ಸೇರಿಸಲಾಗುವುದು. ಕ್ರಮೇಣ ಭೂಕಕ್ಷೆಯ ೆತ್ತರವನ್ನು ಹೆಚ್ಚಿಸಲಾಗುತ್ತದೆ. ಬಳಕ ನಿಗದಿತ ದಿನವೊಂದರಲ್ಲಿ ಆದಿತ್ಯ ಲಗ್ರಾಂಜಿಯನ್ ಬಿಂದುವಿನತ್ತ ಯಾನ ಬೆಳೆಸಲಿದೆ. 125 ದಿನಗಳಲ್ಲಿ ಎಲ್‍-1 ಬಿಂದುವಿಗೆ ಸೇರಿಸಲಾಗುತ್ತದೆ. ಇದು ಸ್ಥಿರತೆ ಹೊಂದಿದ ವಿಶೇಷ ಕಕ್ಷೆಯಾಗಿದೆ. ಈ ವೀಕ್ಷಣಾಲಯಕ್ಕೆ ಗ್ರಹಣವೂ ಬಾಧಿಸುವುದಿಲ್ಲ. ನಿರಂತರವಾಗಿ ಮತ್ತು ದೀರ್ಘವಾಗಿ ಅಡ್ಡಿ ಇಲ್ಲದೇ ಸೂರ್ಯನನ್ನು ಗಮನಿಸಲು ಸಹಾಯಕವಾಗುತ್ತದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top