ಪುತ್ತೂರು: ಮೂರು ದಿನಗಳ ಕಾಲ ನಡೆದ ಪ್ಲಾಸ್ಮಾ ತಂತ್ರಜ್ಞಾನದ ವಸ್ತು ಪ್ರದರ್ಶನ ಮತ್ತು ರಾಷ್ಟ್ರೀಯ ವಿಚಾರ ಸಂಕಿರಣ ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗೆ ನಡೆದಿದ್ದು, ಯಶಸ್ವಿಯಾಗಿದೆ ಎಂದು ಸಮುದಾಯ ಸಂಪರ್ಕ ವಿಭಾಗ, ಐ.ಪಿ.ಆರ್ ಅಹಮದಾಬಾದ್ ಇದರ ಮುಖ್ಯಸ್ಥ ಡಾ. ಎ.ವಿ. ರವಿಕುಮಾರ್ ಹೇಳಿದರು.
ಪ್ಲಾಸ್ಮಾ ಸಂಶೋಧನಾ ಕೇಂದ್ರ, ಅಹಮದಾಬಾದ್ ಮತ್ತು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ( ಸ್ವಾಯತ್ತ) ಪುತ್ತೂರು, ಐಕ್ಯುಎಸಿ ಮತ್ತು ವಿಜ್ಞಾನ ಸಂಘದ ಸಹಯೋಗದಲ್ಲಿ ನಡೆದ ಪ್ಲಾಸ್ಮಾ ತಂತ್ರಜ್ಞಾನದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಅಹಮದಾಬಾದ್ ಐ.ಪಿ.ಆರ್ ಸಮುದಾಯ ಸಂಪರ್ಕ ವಿಭಾಗದ ಮುಖ್ಯಸ್ಥ ಡಾ. ಎ.ವಿ ರವಿಕುಮಾರ್ ಮತ್ತು ಸದಸ್ಯರುಗಳಾದ ಛಾಯ ಚೌದ, ಹರ್ಷ ಮಚ್ಚಾರ್, ರಮೇಶ್ ಬಾಬು ಗತ್ತು, ಚೇತನ್ ಜರಿವಾಲಾ, ಕಾರ್ತಿಕ್ ಮೋಹನ್ ಅವರನ್ನು ಸನ್ಮಾನಿಸಲಾಯಿತು. ದ್ವಿತೀಯ ಬಿ ಎಸ್ಸಿ ವಿಭಾಗದ ವಿದ್ಯಾರ್ಥಿಗಳಾದ ಮನ್ಮಶ್ರೀ ಮತ್ತು ಧನ್ಯಶ್ರೀ ಕಾರ್ಯಕ್ರಮದ ಕುರಿತಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಕಾಲೇಜಿನ ವಿಶೇಷ ಅಧಿಕಾರಿ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯ್ಕ್ ಉಪಸ್ಥಿತರಿದ್ದರು.
ಐಕ್ಯುಎಸಿ ಘಟಕದ ಸಂಯೋಜಕ, ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಪ್ರೊ. ಶಿವಪ್ರಸಾದ್ ಕೆ ಎಸ್ ಸ್ವಾಗತಿಸಿ, ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ, ವಿಜ್ಞಾನ ಸಂಘದ ಸಂಯೋಜಕಿ ನಿಶಾ. ಎನ್ ವಂದಿಸಿ, ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ನಿರ್ವಹಿಸಿದರು.