ಪುತ್ತೂರು : ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಸಂಸ್ಥಾಪಕರ ದಿನಾಚರಣೆಯನ್ನು ಶನಿವಾರ ಎಪಿಎಂಸಿ ರಸ್ತೆಯಲ್ಲಿರುವ ಸಂಘದ ಕಚೇರಿಯಲ್ಲಿ ಆಚರಿಸಲಾಯಿತು.
ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ದೀಪ ಬೆಳಗಿಸುವ ಮೂಲಕ ಸ್ಥಾಪಕರ ದಿನಾಚರಣೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ನಿರ್ದೇಶಕರಾದ ರಾಮಕೃಷ್ಣ ಗೌಡ ಕರ್ಮಲ, ಜಿನ್ನಪ್ಪ ಗೌಡ ಮಳುವೇಲು, ಮಾತೃ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ತೆಂಕಿಲ, ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ಸಂಘದ ಪ್ರವರ್ತಕರಾದ ರವಿ ಮುಂಗ್ಲಿಮನೆ, ಶ್ರೀಧರ ಕಣಜಾಲು, ಲಿಂಗಪ್ಪ ಗೌಡ ತೆಂಕಿಲ, ನಾರಾಯಣ ಗೌಡ ಪಾದೆ, ನಾರಾಯಣ ಗೌಡ ಅರ್ವರ, ಸಂಘದ ಪ್ರಮುಖರಾದ ದಯಾನಂದ ಕೆ.ಎಸ್., ವಸಂತ ವೀರಮಂಗಲ ಉಪಸ್ಥಿತರಿದ್ದರು.
ಒಕ್ಕಲಿಗ ಸಮುದಾಯ ಪತ್ತಿನ ಸೇವಾ ಸಹಕಾರಿ ಸಂಘ ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ, ಆಲಂಕಾರು, ಪುತ್ತೂರು ಎಸ್.ಎಂ.ಟಿ. ಕಾಣಿಯೂರು ಮತ್ತು ಪ್ರಸ್ತುತ ಬೆಳ್ಳಾರೆ ಸೇರಿದಂತೆ ಪ್ರಸ್ತುತ 9 ಶಾಖೆಗಳು ಸಕ್ರೀಯವಾಗಿ ವ್ಯವಹಾರವನ್ನು ನಡೆಸುತ್ತಾ ಇದ್ದು, ಸುಮಾರು 6,300ಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿದ್ದು, ಸುಮಾರು 3.91 ಕೋಟಿ ಪಾಲುಬಂಡವಾಳ ಹೊಂದಿರುತ್ತದೆ ಎಂದರು.
ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು ರೂ. 400ಕೋಟಿ ಮಿಕ್ಕಿ ವ್ಯವಹಾರ ಮಾಡಲಾಗಿದ್ದು, ರೂ. 1,05,89,208-05 ಲಾಭಾಂಶ ಪಡೆಯಲಾಗಿದೆ.