ಲೋಕಕಲ್ಯಾಣಾರ್ಥ, ಹಿಂದೂ ಬಾಂಧವರ ಏಕತೆಗಾಗಿ ಮನೆ ಮನೆಯಲ್ಲಿ “ಏಕಾದಶ ಕೋಟಿ ಮಹಾಲಿಂಗೇಶ್ವರ ಜಪ” ಕ್ಕೆ ಚಾಲನೆ

ಪುತ್ತೂರು: ಲೋಕ ಕಲ್ಯಾಣಾರ್ಥ, ಸಮಗ್ರತೆ, ಹಿಂದೂ ಬಾಂಧವರ ಏಕತೆಗಾಗಿ, ಮನಸ್ಸಿನ ಏಕಾಗ್ರತೆ ಸಿದ್ದಿಗಾಗಿ ಸೆ.24ರ ತನಕ ಭಕ್ತರು ಮನೆ ಮನೆಯಲ್ಲೇ ಮಾಡುವ ’ಏಕಾದಶ ಕೋಟಿ ಮಹಾಲಿಂಗೇಶ್ವರ ಜಪ ಯಜ್ಞ’ ಕ್ಕೆ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೆ.2 ರಂದು ಉದಯ ಕಾಲ 6.30 ಕ್ಕೆ ಸಂಕಲ್ಪದೊಂದಿಗೆ ಚಾಲನೆ ನೀಡಲಾಯಿತು.

ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ಸತ್ಯಧರ್ಮ ನಡೆಯಲ್ಲಿ ಪ್ರಾರ್ಥನೆ ಮಾಡಿ ಜಪ ಯಜ್ಞವನ್ನು ಉದ್ಘಾಟಿಸಿದಂತೆ ಇತರ ಕೇಂದ್ರಗಳಲ್ಲೂ ಜಪ ಯಜ್ಞ ಆರಂಭಗೊಂಡಿತ್ತು. ದೇವಳದ ಇನ್ನೋರ್ವ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ಜಪ ಯಜ್ಞದ ಸಂಕಲ್ಪ ನೆರವೇರಿಸಿದರು. ಬಳಿಕ ” ಓಂ ಶ್ರೀ ಮಹಾಲಿಂಗೇಶ್ವರಾಯ ನಮಃ’ ಎಂಬ ಸರಳ ಸೂತ್ರದಲ್ಲಿ ಜಪ ಯಜ್ಞ ಆರಂಭಗೊಂಡಿತ್ತು. ಜಪಯಜ್ಞದ ಕೊನೆಯಲ್ಲಿ ರಾಜ್ಯ ಧಾರ್ಮಿಕ ಪರಿಷತ್‌ನ ನಿಕಟಪೂರ್ವ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರು ಜಪಯಜ್ಞದ ಮಹತ್ವ ವಿವರಿಸಿದರು. ಈ ಸಂದರ್ಭ ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್, ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು, ಶೇಖರ್ ನಾರಾವಿ, ಬಿ.ಐತ್ತಪ್ಪ ನಾಯ್ಕ್, ರಾಮಚಂದ್ರ ಕಾಮತ್, ರಾಮದಾಸ್ ಗೌಡ ಸಹಿತ ಭಕ್ತರು ಜಪಯಜ್ಞದಲ್ಲಿ ಭಾಗವಹಿಸಿದ್ದರು.

ಲೋಕಕಲ್ಯಾಣಕ್ಕಾಗಿ ಮಳೆ ಬರುವಂತೆ ಎಲ್ಲರಲ್ಲೂ ಪ್ರಾರ್ಥನೆಗೆ ಮನವಿ:































 
 

ಏಕಾದಶ ಕೋಟಿ ಮಹಾಲಿಂಗೇಶ್ವರ ಜಪ ಯಜ್ಞ ವನ್ನು ಶಾಸಕ ಆಶೋಕ್ ಕುಮಾರ್ ರೈ ಅವರು ಕೂಡಾ ಮನೆಯಲ್ಲಿ ಮಾಡುವ ಸಂಕಲ್ಪದಂತೆ ಬೆಳಿಗ್ಗೆ ದೇವಳದ ಸನ್ನಿಧಾನದಲ್ಲಿ ಜಪ ಯಜ್ಞ ಆರಂಭಿಸಿದರು. ಇದೇ ಸಂದರ್ಭದಲ್ಲಿ ಅವರು ಲೋಕಕಲ್ಯಾಣಾರ್ಥವಾಗಿ ಮಳೆ, ಗಾಳಿ, ಬೆಳಕು ಇರಬೇಕು. ಈ ಭಾರಿ ಮಳೆ ಕಡಿಮೆಯಾಗಿದ್ದು ಮಳೆಗಾಗಿ ಎಲ್ಲರು ಪ್ರಾರ್ಥನೆ ಮಾಡುವಂತೆ ವಿನಂತಿಸಿದರು. ಈ ಸಂದರ್ಭದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಕೋಡಿಂಬಾಡಿ ಗ್ರಾ.ಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಸುದೇಶ್ ಶೆಟ್ಟಿ, ರಿತೇಶ್ ಶೆಟ್ಟಿ, ಸುದೇಶ್ ಚಿಕ್ಕಪುತ್ತೂರು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಸೆ.10 ಕ್ಕೆ ಮಹಾಜಪದೊಂದಿಗೆ ವರುಣ ಜಪ :

ಶಾಸಕರು ವರುಣನ ಕೃಪೆಗೆ ಪ್ರಾರ್ಥಿಸಿದಂತೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೆ.೧೦ ಕ್ಕೆ ಏಕಾದಶ ಕೋಟಿ ಮಹಾಲಿಂಗೇಶ್ವರ ಮಹಾಜಪ ಯಜ್ಞ ನಡೆಯಲಿದ್ದು ಅದೇ ದಿನ ೧೦೦೮ ನಾರಿಕೇಳ ಅಭಿಷೇಕ ಹಾಗು ವರುಣ ಜಪವನ್ನೂ ಮಾಡಲಾಗುವುದು ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top