ಪುತ್ತೂರು : ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಸ್ನಾತಕೋತ್ತರ ಪದವಿಯ ದ್ವಿತೀಯ ಸೆಮಿಸ್ಟರ್ ಫಲಿತಾಂಶವು ಆ.31 ರಂದು ಪ್ರಕಟವಾಗಿದೆ.
ಕಾಲೇಜಿನ ವೆಬ್ಸೈಟ್ vcputtur.ac.in ನಲ್ಲಿ ಪ್ರಕಟವಾಗಿದೆ.
ಒಟ್ಟು ಶೇ.96 ಉತ್ತೀರ್ಣತೆ ದಾಖಲಾಗಿದ್ದು, ಎಂ.ಎ. (ಪತ್ರಿಕೋದ್ಯಮ) ಶೇ.100, ಎಂ.ಕಾಂ. ಶೇ.100, ಎಂ.ಎಸ್ಸಿ. (ರಸಾಯನಶಾಸ್ತ್ರ) ಶೇ.100, ಎಂ.ಎಸ್ಸಿ. (ಗಣಿತಶಾಸ್ತ್ರ) ಶೇ.40 ರಂತೆ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ.ವಿ.ಜಿ.ಭಟ್ ಹಾಗೂ ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ.ಶ್ರೀಧರ ಎಚ್.ಜಿ. ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.