ಪುತ್ತೂರು: ಕಲ್ಲಾರೆ ಶ್ರೀ ಗುರುರಾಘವೇಂದ್ರ ಸೇವಾ ಸಮಿತಿ ವತಿಯಿಂದ ಮೂರು ದಿನಗಳ ಕಾಲ ನಡೆಯುವ ಶ್ರೀ ಗುರು ಸಾರ್ವಭೌಮರ 352ನೇ ಆರಾಧನಾ ಮಹೋತ್ಸವ ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಎರಡನೇ ದಿನವಾದ ಶುಕ್ರವಾರ ವಿಜೃಂಭಣೆಯಿಂದ ಜರಗಿತು.

ಮಠದ ಪ್ರಧಾನ ಅರ್ಚಕ ಎ.ರಾಘವೇಂದ್ರ ಉಡುಪ ಅವರ ನೇತೃತ್ವದಲ್ಲಿ ಮುಂಜಾನೆ 6 ಗಂಟೆಗೆ ನಿರ್ಮಾಲ್ಯ ವಿಸರ್ಜನಾ ಪೂಜೆ, 10 ಗಂಟೆಗೆ ಪಂಚಾಮೃತಾಭಿಷೇಕ, ಶ್ರೀ ಗುರುಗಳ ಆರಾಧನೆ, ಮಧ್ಯಾಹ್ನ 1ಕ್ಕೆ ಮಹಾಪೂಜೆ ನಡೆದು ಅನ್ನಸಂತರ್ಪಣೆ ನಡೆಯಿತು.

ಗುರುವಾರ ರಾತ್ರಿ ಮಹಾಪೂಜೆ ಬಳಿಕ ಪಲ್ಲಕಿ ಉತ್ಸವ, ರಥೋತ್ಸವ ನಡೆದು ಪ್ರಸಾದ ವಿತರಣೆಯಾಯಿತು.

ಈ ಸಂದರ್ಭದಲ್ಲಿ ಶ್ರೀ ಮಠದ ಕಾರ್ಯದರ್ಶಿ ಯೂ.ಪೂವಪ್ಪ, ಟ್ರಸ್ಟಿಗಳಾದ ಯನ್.ಸುಬ್ರಹ್ಮಣ್ಯಂ, ಬೆಟ್ಟ ಈಶ್ವರ ಭಟ್, ಗಣಪತಿ ನಾಯಕ್, ಲೋಕೇಶ್ ಹೆಗ್ಡೆ,, ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.