ಕುಂಡಡ್ಕ : ಮೂರನೇ ವರ್ಷದ ರಕ್ಷಾಬಂಧನ ಆಚರಣೆ | ರಾಷ್ಟ್ರೀಯತೆಯ ವಿಚಾರದಲ್ಲಿ ನಾವೆಲ್ಲರೂ ಒಂದಾಗಬೇಕು : ರಜನೀಶ್ ಪಿ

ಮುಕ್ಕೂರು : ದೇಶ, ಧರ್ಮ, ರಾಷ್ಟ್ರೀಯತೆಯ ವಿಚಾರದಲ್ಲಿ ಪಕ್ಷ, ಜಾತಿ ಮೀರಿ ನಾವೆಲ್ಲರೂ ಒಂದಾಗಬೇಕು. ಹಿಂದೂ ಸಮಾಜವನ್ನು ವಿಭಜಿಸುವ ಹುನ್ನಾರಗಳಿಗೆ ಅವಕಾಶ ಕಲ್ಪಿಸದೆ, ನಾವು ಜಾಗೃತ ಸಮಾಜದ ಮೂಲಕ ಭಾರತೀಯ ಸಂಸ್ಕೃತಿ, ಸಂಸ್ಕಾರದ ರಕ್ಷಕರಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ರಜನೀಶ್ ಪಿ ಹೇಳಿದರು.

ಕುಂಡಡ್ಕ-ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ನೇಸರ ಯುವಕ ಮಂಡಲದ ಜಂಟಿ ಆಶ್ರಯದಲ್ಲಿ ಕುಂಡಡ್ಕ ಕಮಲ ಅವರ ನಿವಾಸದಲ್ಲಿ ನಡೆದ ಮೂರನೇ ವರ್ಷದ ರಕ್ಷಾಬಂಧನ ಆಚರಣೆಯಲ್ಲಿ ರಕ್ಷಾ ಬಂಧನದ ಮಹತ್ವದ ಬಗ್ಗೆ ಅವರು ಮಾತನಾಡಿದರು.

ರಕ್ಷಾ ಬಂಧನ ಅಂದರೆ ಕೇವಲ ಕೈಗೆ ನೋಲು ಕಟ್ಟುವುದಲ್ಲ, ಅದರ ಹಿಂದೆ ಅಪಾರ ಅರ್ಥ ಇದೆ. ಹಿಂದೂ ಧರ್ಮದ ರಕ್ಷಣೆಗೆ ಹೇಗೆ ಸಂಘಟಿತರಾಗಿರಬೇಕು ಅನ್ನುವ ಸಂದೇಶವು ಅದರೊಳಗಿದೆ ಎಂದರು.































 
 

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ‌ ಅಧ್ಯಕ್ಷ ಉಮೇಶ್ ಕೆಎಂಬಿ ಮಾತನಾಡಿ, ಸರಳತೆಯಲ್ಲಿ ಶ್ರೇಷ್ಟತೆಯನ್ನು ಕಾಣುವ ಹಬ್ಬವೆಂದರೆ ಅದು ರಕ್ಷಾಬಂಧನ. ಸನಾತನ ಸಂಸ್ಕೃತಿಯ ಆಚರಣೆಗಳಲ್ಲಿ ಈ ಹಬ್ಬವು ಸೋದರತೆಯ ಸಂಕೇತವನ್ನು ಸಾರುತ್ತದೆ. ಐಕ್ಯಮತದಿಂದ ಬದುಕಬೇಕು ಅನ್ನುವ ಸಂದೇಶವನ್ನು ತಿಳಿಸುತ್ತದೆ ಎಂದ ಅವರು ಅತ್ಯಂತ ಅರ್ಥಪೂರ್ಣ ರೀತಿಯಲ್ಲಿ ರಕ್ಷಾಬಂಧನ ಆಯೋಜಿಸಿರುವ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದರು.

ಪತ್ರಕರ್ತ ಪ್ರವೀಣ್ ಚೆನ್ನಾವರ,  ಮಾತನಾಡಿದರು. ವೇದಿಕೆಯಲ್ಲಿ ಕುಂಡಡ್ಕ-ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ರವಿ ಕುಂಡಡ್ಕ, ಹಿರಿಯರಾದ ಮುದರು ಉಪಸ್ಥಿತರಿದ್ದರು.ಪುರುಷೋತ್ತಮ ಕುಂಡಡ್ಕ ಸ್ವಾಗತಿಸಿ, ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top