ಇಚ್ಲಂಪಾಡಿ: ಇಚ್ಲಂಪಾಡಿ ಗ್ರಾಮದ ಅಲೆಕ್ಕಿ ನಿವಾಸಿ ಬಾಲಕೃಷ್ಣ ಗೌಡ (51) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಬಾಲಕೃಷ್ಣ ಗೌಡರು ಪುತ್ತೂರಿನ ಬಾರ್ ಒಂದರಲ್ಲಿ ಕಳೆದ 22 ವರ್ಷಗಳಿಂದ ಕೆಲಸ ಮಾಡಿ, ಪ್ರಸ್ತುತ ಎರಡು ವರ್ಷದಿಂ,ದ ಬೇರೆ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದರು. ಅನಾರೋಗ್ಯದ ಹಿನ್ನಲೆಯಲ್ಲಿ ಕೆಲಸಕ್ಕೆ ರಜೆ ಹಾಕಿ ಮನೆಯಲ್ಲಿದ್ದರು. ಬುಧವಾರ ಮನೆಯಲ್ಲಿ ಯಾರೂ ಇಲ್ಲದ ವೇಲೆ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರ ಎಂದು ತಿಳಿದು ಬಂದಿದೆ.
ನೆಲ್ಯಾಡಿಗೆ ಹೋಗಿದ್ದ ಪತ್ನಿ ಹಾಗೂ ಮಗ ಮನೆಗೆ ಬಂದ ವೇಳೆ ಈ ಕೃತ್ಯ ಎಸಗಿದ್ದು ತಿಳಿದುಬಂದಿದೆ. ಈ ಕುರಿತು ನೆಲ್ಯಾಡಿ ಹೊರಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.