ಬಪ್ಪಳಿಗೆ ಸಿಂಗಾಣಿಯಲ್ಲಿ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ, ಮೊಸರುಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ನಗರದ ಬಪ್ಪಳಿಗೆ ಸಿಂಗಾಣಿಯಲ್ಲಿ ನಡೆಯುವ 2ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಮೊದಲಿಗೆ ಮಹಾಲಿಂಗೇಶ್ವರ ದೇವರಿಗೆ ಎಂಸಿಬಿ ಆರ್ಟ್ಸ್‌ ಆಂಡ್ ಸ್ಪೋರ್ಟ್ಸ್ ಕ್ಲಬ್ ಬಪ್ಪಳಿಗೆ ಮತ್ತು ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ಸಮಿತಿ ವತಿಯಿಂದ ಪೂಜೆ ಸಲ್ಲಿಸಲಾಯಿತು. ಬಳಿಕ ದೇವಾಲಯದ ಪ್ರಧಾನ ಅರ್ಚಕ ವಸಂತ ಕೆದಿಲಾಯ ಅವರು ಆಮಂತ್ರಣ ಪತ್ರಿಕೆಯನ್ನ ಬಿಡುಗಡೆಗೊಳಿಸಿದರು. ಹಾಗೆಯೇ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರ ಆಶೀರ್ವಾದವನ್ನ ಪಡೆದ ಬಳಿಕ ಅಲ್ಲಿನ ಅರ್ಚಕರಾದ ರವಿಚಂದ್ರ ನೆಲ್ಲಿತ್ತಾಯ ಅವರಿಗೂ ಆಮಂತ್ರಣ ಪತ್ರಿಕೆ ನೀಡಲಾಯಿತು.

ಶ್ರೀಕೃಷ್ಣ ಜನ್ಮಾಷ್ಠಮಿ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮ ಸೆ.10ರಂದು ಸಿಂಗಾಣಿಯ ಹಿಲ್ ಗ್ರೌಂಡ್ ನಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಮೊದಲು ಬೆಳಿಗ್ಗೆ 8:30ಕ್ಕೆ ಬಪ್ಪಳಿಗೆಯ ರಾಗಿಕುಮೇರಿ ಶಾಲಾ ರಸ್ತೆಯ ಬಳಿಯಿಂದ ಕೃಷ್ಣ ವೇಷಧಾರಿ ಮಕ್ಕಳು ಹಾಗೂ ಚೆಂಡೆ ವಾದ್ಯಗಳ ಮೂಲಕ ನೂರಾರು ಜನರ ಸಮ್ಮುಖದಲ್ಲಿ ಮೆರವಣಿಗೆ ನಡೆಯಲಿದೆ. ಬಳಿಕ ಸಿಂಗಾಣಿಯ ಹಿಲ್ ಗ್ರೌಂಡ್ ನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಇನ್ನು ಮಹಿಳೆಯರು ಪುರುಷರು ಮಕ್ಕಳಿಗಾಗಿ ವಿವಿಧ ಆಟೋಟ ಸ್ಪರ್ಧೆಗಳು ಕೂಡ ನಡೆಯಲಿದೆ.































 
 

ಸಂಜೆ ಸುಮಾರು 5 ಗಂಟೆಗೆ ಸರಿಯಾಗಿ  ಸಭಾ ಹಾಗೂ ಸನ್ಮಾನ ಕಾರ್ಯಕ್ರಮ ನಡರಯಲಿದೆ. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸಹಜ್ ರೈ ಬಳಜ್ಜ, ವೈದ್ಯ ಡಾ.ರವಿ ನಾರಾಯಣ ಭಟ್, ವೃತ್ತ ನಿರೀಕ್ಷಕ ಸುನೀಲ್ ಕುಮಾರ್, ನಗರಸಭೆ ಮುಖ್ಯಾಧಿಕಾರಿ ಮಧು ಎಸ್ ಮನೋಹರ್, ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಪ್ರಧಾನ ಅರ್ಚಕ ರವಿಚಂದ್ರ ನೆಲ್ಲಿತ್ತಾಯ, ನಗರಸಭೆ ಸದಸ್ಯ ನವೀನ್ ಕುಮಾರ್, ಮಾರಿಯಮ್ಮ‌ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮೋಹನ್ ನೆಲ್ಲಿಗುಂಡಿ, ಅಂಗನವಾಡಿ ಕಾರ್ಯಕರ್ತೆ ಸುಮಿತ್ರಾ ಹರೀಶ್ ಮೊದಲಾದವರು ಭಾಗವಹಿಸಲಿದ್ದಾರೆ.

ಇನ್ನು ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ಸಮಿತಿ ಮತ್ತು ಎಂಸಿಬಿ ಸ್ಪೋರ್ಟ್ಸ್ ಆಂಡ್ ಆರ್ಟ್ಸ್‌ ಕ್ಲಬ್  ವತಿಯಿಂದ ಗಣ್ಯರಿಗೆ ಸನ್ಮಾನ ನಡೆಯಲಿದೆ. ಬಪ್ಪಳಿಗೆ ರಾಗಿಕುಮೇರಿ ಶಾಲೆಯ ನಿವೃತ್ತ ಶಿಕ್ಷಕಿ ಕಮಲಾಕ್ಷಿ ಟೀಚರ್, ಪುತ್ತೂರು ಮೋಕ್ಷಧಾಮ‌ ಮೇಲ್ವಿಚಾರಕ ಸತೀಶ್, ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ್ತಿ ವಿನುಶ್ರೀ ಗೌಡ ಹಾಗೂ ಚಿತ್ರನಟ ಹಾಸ್ಯ ಕಲಾವಿದ ರವಿ ರಾಮಕುಂಜ ಅವರಿಗೆ ಸನ್ಮಾನ ನಡೆಯಲಿದೆ.

ಕಾರ್ಯಕ್ರಮದಲ್ಲಿ ವಿಶೇಷವಾಗಿ ತ್ರಿಶೂಲ್ ಶೆಟ್ಟಿ ನಿರ್ದೇಶನದ ಪುಳಿಮುಂಚಿ ತುಳು ಚಿತ್ರತಂಡ ಭಾಗಿಯಾಗಲಿದ್ದಾರೆ. ನಟ, ನಟಿ ಹಾಗೂ ಹಾಸ್ಯ ಕಲಾವಿದರು ಸೇರಿದಂತೆ ಹಲವರು ಭಾಗಿಯಾಗಿ ಪುಳಿಮುಂಚಿ ಚಿತ್ರದ ಪ್ರೊಮೋಷನ್ ಮಾಡಲಿದ್ದಾರೆ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top