ಮಂಗಳೂರು: ಖಾಸಗಿ ಬಸ್ಸಿನ ಫುಟ್ ಬೋರ್ಡ್ ನಲ್ಲಿ ನಿಂತಿದ್ದ ಬಸ್ ನಿರ್ವಾಹಕರೊಬ್ಬರು ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಮಂಗಳೂರಿನ ನಂತೂರು ವೃತ್ತದ ಬಳಿ ನಡೆದಿದೆ.
ಮೃತಪಟ್ಟ ನಿರ್ವಾಹಕರನ್ನು ಹೀರಯ್ಯ (23) ಎಂದು ಗುರುತಿಸಲಾಗಿದೆ.
ಕಾಟಿಪಳ್ಳದಿಂದ ನಂತೂರು ವೃತ್ತವಾಗಿ ಮಂಗಳಾದೇವಿಗೆ ತೆರಳುತ್ತಿದ್ದ ಖಾಸಗಿ ಬಸ್ಸಿನ ಮುಂಭಾಗದ ಫುಟ್ ಬೋರ್ಡ್ ನಲ್ಲಿ ನಿಂತಿದ್ದಾಗ ಆಯತಪ್ಪಿ ಕೆಳಗೆ ಬಿದ್ದಾಗ ಸಂಚಾರಿ ಪೊಲೀಸರು ಸಾರ್ವಜನಿಕರ ಸಹಕಾರದಿಂದ ಆಸ್ಪತ್ರೆಗೆ ದಾಖಲಿಸಿದರೂ ಆದಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.