ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿಯವರಿಗೆ  ಪ್ರತಿಷ್ಠಿತ  “ಡಾ. ಸರ್ವಪಲ್ಲಿ ರಾಧಾಕೃಷ್ಣನ್” ರಾಷ್ಟ್ರೀಯ ಪ್ರಶಸ್ತಿ-2023″

ಸುಳ್ಯ : ಸುಳ್ಯದ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿಯವರು ನಾಡಿನ ಸಮಾಚಾರ ಸೇವಾ ಸಂಘ ಗೋಕಾಕ, ಬೆಳಗಾವಿ  ಇವರು ಶಿಕ್ಷಕರ ದಿನಾಚರಣೆ ನಿಮಿತ್ಯ ಪ್ರತೀ ವರ್ಷ ಶಿಕ್ಷಕರ ಅತ್ಯುತ್ತಮ ಸಾಧನೆಗಾಗಿ ಕೊಡ ಮಾಡುವ ಪ್ರತಿಷ್ಠಿತ “ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟೀಯ ಪ್ರಶಸ್ತಿ-2023” ಕ್ಕೆ ಆಯ್ಕೆಯಾಗಿದ್ದಾರೆ.

ಶಿಕ್ಷಣ, ಸಾಹಿತ್ಯ, ಸಮಾಜ ಸೇವೆ, ಸಂಘಟನಾ ಕ್ಷೇತ್ರದ ಕಾರ್ಯಗಳನ್ನು ಗಮನಿಸಿ ಇವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದು,  ಸೆ. 24ರಂದು ಬೆಳಗಾವಿಯ ಕುಮಾರ ಗಂಧರ್ವ ಕಲಾಮಂದಿರದಲ್ಲಿ ನಡೆಯುವ ‘ಗುರುವಂದನಾ’ ಕಾರ್ಯಕ್ರಮದಲ್ಲಿ ಹಮ್ಮಿಕೊಂಡ ‘ಪ್ರಶಸ್ತಿ ಪ್ರದಾನ ಸಮಾರಂಭ’ದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ಈ ಹಿಂದೆ ಚಂದನ ಟಿವಿಯ ಸ್ವರ ಮಾಧುರ್ಯ ಪ್ರಶಸ್ತಿಯೊಂದಿಗೆ ಹಲವು ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಸ್ವೀಕರಿಸಿರುವ ಡಾ. ಅನುರಾಧಾ ಕುರುಂಜಿಯವರು ಈ ಪ್ರಶಸ್ತಿಗೆ ಆಯ್ಕೆಯಾಗಲು, ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿ ದೆಸೆಯಲ್ಲಿರುವಾಗಲೇ ಎನ್ಎಸ್ಎಸ್ ನಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದ ಎರಡೂ ಹಂತದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ (RD Parade)  ಭಾಗವಹಿಸಿದ ಸುಳ್ಯ ತಾಲೂಕಿನ ಪ್ರಪ್ರಥಮ ಹಾಗೂ ಸುಳ್ಯ ಎನ್ನೆಂಸಿಯ 47 ವರ್ಷಗಳ ಇತಿಹಾಸದಲ್ಲಿಯೇ ಏಕೈಕ ವಿದ್ಯಾರ್ಥಿನಿ ಎಂಬ ದಾಖಲೆ. ಸ್ಕೌಟ್ – ಗೈಡ್ ಶಿಕ್ಷಕಿಯಾಗಿದ್ದುದಲ್ಲದೆ ರೆಡ್ ಕ್ರಾಸ್ ನ ಕಾರ್ಯಕ್ರಮಾಧಿಕಾರಿಯಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸುವುದರೊಂದಿಗೆ 300ಕ್ಕೂ ಅಧಿಕ ವಿದ್ಯಾರ್ಥಿ ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಆಯೋಜನೆಯೊಂದಿಗೆ ಎರಡು ಬಾರಿ ಮಂಗಳೂರು ವಿವಿ ಮಟ್ಟದ ಅತ್ಯುತ್ತಮ ಕಾರ್ಯಕ್ರಮಾಧಿಕಾರಿ ಹಾಗೂ ಘಟಕ  ಪ್ರಶಸ್ತಿ, ಸಾಮಾಜಿಕವಾಗಿ ವ್ಯಕ್ತಿತ್ವ ವಿಕಸನ ತರಬೇತುದಾರರಾಗಿ ಚಂದನ ಟಿವಿಯಲ್ಲಿ ತರಬೇತಿ ನೀಡಿದುದಲ್ಲದೇ ದಾಖಲೆಯ 1639  ತರಬೇತಿ ಕಾರ್ಯಕ್ರಮಗಳನ್ನು ನೀಡುವ ಮೂಲಕ ಸಮಾಜ ಸೇವೆಯಲ್ಲಿ, ಜ್ಞಾನ ಪ್ರಸರಣೆಯಲ್ಲಿ ನಿರತ, ಜೇಸಿರೆಟ್  ಅಧ್ಯಕ್ಷೆಯಾಗಿ































 
 

ದಾಖಲೆಯ ಎರಡು ವಲಯ, ಮೂರು ರಾಷ್ಟ್ರ ಪ್ರಶಸ್ತಿಗಳ ಗರಿ,  ವಿವಿಧ ಸಂಘ ಸಂಸ್ಥೆಗಳಲ್ಲಿ ಸಂಘಟಕಿಯಾಗಿ ಸೇವೆ, ಸಾಹಿತ್ಯಕವಾಗಿ ಡಾಕ್ಟರೇಟ್ ಪದವಿ ಪಡೆಯುವುದರೊಂದಿಗೆ ಐದು ಕೃತಿಗಳ ಅನಾವರಣ,

ವಿವಿಧ ಸಂಸ್ಥೆಗಳ ಗೃಹ ಪತ್ರಿಕೆ, ವಾರ್ತಾ ಪತ್ರಿಕೆಗಳ ಸಂಪಾದಕತ್ವ, ಆಕಾಶವಾಣಿಗಳಲ್ಲಿ ನಿರಂತರ ಭಾಷಣಗಳ ಬಿತ್ತರ, ಕವಿಗೋಷ್ಠಿ, ಸಂಶೋಧನಾ ಲೇಖನಗಳ ಪ್ರಕಟ,  ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ, ಯಕ್ಷಗಾನ, ಕ್ರೀಡೆ, ಸಂಗೀತ, ಸಮಾಜ ಸೇವೆಯಲ್ಲಿ ಆಸಕ್ತಿ. ಹೀಗೆ ಇವರ ಈ ಎಲ್ಲಾ  ಶೈಕ್ಷಣಿಕ, ಸಾಹಿತ್ಯಕ, ಸಾಮಾಜಿಕ, ಸಂಘಟನಾ  ಕ್ಷೇತ್ರದ ಕಾರ್ಯವೈಖರಿಯನ್ನು ಗಮನಿಸಿ ಇವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಇವರು ಕುರುಂಜಿ ಪದ್ಮಯ್ಯ ಗೌಡ ಮತ್ತು ದಿ. ಸೀತಮ್ಮ ಕುರುಂಜಿ ದಂಪತಿ ಪುತ್ರಿ ಹಾಗೂ ಕೆವಿಜಿ  ಪಾಲಿಟೆಕ್ನಿಕ್ ನ  ಶಿಕ್ಷಕ ಚಂದ್ರಶೇಖರ್ ಬಿಳಿನೆಲೆಯವರ ಪತ್ನಿ .

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top