ಪುತ್ತೂರಿನಲ್ಲಿ ಹೊಸ ಶಾಸಕರು ಕೋಟಿ ಕೋಟಿ ಘೋಷಣೆ ಮಾಡ್ತಾರೆ ! ಮುಖ್ಯಮಂತ್ರಿಗಳು ಮುಂದಿನ ಒಂದು ವರ್ಷದ ತನಕ ಅಭಿವೃದ್ಧಿಗೆ ಅನುದಾನ ಇಲ್ಲಾ ಅಂತಾರೆ ! ಹಾಗಾದರೆ ಕೋಟಿ ಎಲ್ಲಿಂದ ಬರ್ತದೆ ? : ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಪ್ರಶ್ನೆ

ಪುತ್ತೂರು : ಒಂದೆಡೆ ಪುತ್ತೂರಿನಲ್ಲಿ ಹೊಸ  ಶಾಸಕ ಅಶೋಕ್ ಕುಮಾರ್ ರೈ ಪುತ್ತೂರಿನ ಅಭಿವೃದ್ಧಿಗೆ ಕೋಟಿ-ಕೋಟಿ ಘೋಷಣೆ ಮಾಡ್ತಾರೆ, ಇನ್ನೊಂದೆಡೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಂದಿನ ಒಂದು ವರ್ಷದ ತನಕ ಅಭಿವೃದ್ಧಿಗೆ ಯಾವುದೇ ಅನುದಾನ ಇಲ್ಲಾ ಅನ್ತಾರೆ. ಹಾಗಾದರೆ ಕೋಟಿ ಎಲ್ಲಿಂದ ?

ಹೀಗೆಂದು ಪ್ರಶ್ನಿಸಿದ್ದಾರೆ ಮಾಜಿ ಶಾಸಕ ಸಂಜೀವ ಮಠಂದೂರು.

ಪುತ್ತೂರಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರೀತಿಯ ಹೇಳಿಕೆ ನೀಡಿ ಜನರನ್ನು ಗೊಂದಲದಲ್ಲಿ ಸಿಲುಕಿಸುತ್ತಿದ್ದಾರೆ. ತಕ್ಷಣ ಗೊಂದಲ ನಿವಾರಣೆ ಮಾಡಲು ಅವರು ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.



































 
 

ಈಗಾಗಲೇ ಸೋಮವಾರ ತನ್ನ ನೂತನ ಶಾಸಕರ ಕಚೇರಿಯನ್ನು ಶಾಸಕ ಅಶೋಕ್ ಕುಮಾರ್ ರೈ ಅವರು ತೆರೆದಿದ್ದಾರೆ. ಕಚೇರಿಯೇನೋ ತೆರೆದದ್ದು ಸರಿ. ಆದರೆ ಕಚೇರಿಗೆ ಬಳಕೆ ಮಾಡಿದ ಅನುದಾನ ಜನತೆಯನ್ನು ಬೆಚ್ಚಿಬೀಳಿಸುವಂತದ್ದು. ಮತ್ತೊಂದೆಡೆ ನಗರಸಭೆಗೆ ಸಂಬಂಧಿಸಿದ ಪುಡಾ ಕಚೇರಿಯನ್ನು ಅಲ್ಲಿಂದ ಎತ್ತಂಗಡಿ ಮಾಡಿ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸಿದ್ದು. ಇದು ಜನಸಾಮಾನ್ಯರ ಕಂಗೆಣ್ಣಿಗೆ ಗುರಿಯಾದ್ದಲ್ಲದೆ, ಪರಿಣಾಮ ನಗರಸಭೆಗೆ ಬರುತ್ತಿದ್ದ ಬಾಡಿಗೆ ಖಾಸಗಿಯವರ ಪಾಲಾದಂತಾಗಿದೆ. ಅದೂ ನೂತನ ಕಚೇರಿಗೆ ಜನಸಾಮಾನ್ಯರಿಂದ  ನಗರಸಭೆಗೆ ಸಲ್ಲುವ ತೆರಿಗೆ ಹಣದಿಂದ. ಇದು ಖಂಡನೀಯ ಎಂದು ಅವರು ಹೇಳಿದರು.

ನಗರಸಭೆಗೆ ನಷ್ಟ. :

ಈಗಾಗಲೇ ಶಾಸಕರ ಕಚೇರಿ ಸ್ಥಳದಲ್ಲಿದ್ದ ನಗರ ಯೋಜನಾ ಪ್ರಾಧಿಕಾರ ಕಚೇರಿ ನಗರಸಭೆಗೆ ಸಂಬಂಧಿಸಿದ್ದು, ಪುಡಾಕ್ಕೆ ವಾರ್ಷಿಕ ಆದಾಯದಲ್ಲಿ ನಗರಸಭೆಯ ಬಾಡಿಗೆ ನೀಡಿ ಉಳಿದದ್ದನ್ನು ಕೆರೆ ಮುಂತಾದ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಲಾಗುತ್ತಿತ್ತು. ಇದರಿಂದ ನಗರಸಭೆಗೆ ಹೆಚ್ಚುವರಿ ಆದಾಯ ಬರುತ್ತಿತ್ತು. ಇದೀಗ ಖಾಸಗಿ ಕಟ್ಟಡಕ್ಕೆ ಸ್ಥಳಾಂತರವಾಗಿದ್ದರಿಂದ ತಿಂಗಳು 16 ಸಾವಿರ ಬಾಡಿಗೆ ನೀಡಬೇಕಾದ ಪರಿಸ್ಥಿತಿ ಉಂಟಾಗಿದೆ. ಪರಿಣಾಮ ನಗರಸಭೆಗೆ ವಾರ್ಷಿಕವಾಗಿ ಸಲ್ಲುವ ಸುಮಾರು 10 ಲಕ್ಷಕ್ಕೂ ಮಿಕ್ಕಿ ನಷ್ಟ ಉಂಟಾಗಲಿದೆ ಎಂದು ಮಠಂದೂರು ತಿಳಿಸಿದ್ದಾರೆ.

ಶಾಸಕರ ನೂತನ ಕಚೇರಿಗೆ ಬರೋಬ್ಬರಿ 31 ಲಕ್ಷ ರೂ. ಬಳಕೆ ಮಾಡಲಾಗಿದೆ. ಅದೂ ನಗರಸಭೆಯ ತೆರಿಗೆಯಿಂದ ಬಂದ ಹಣ. ಈ ಹಣ ನಗರಸಭೆ ವಾರ್ಡ್ ಗಳ ಅಭಿವೃದ್ಧಿಗೆ ಬಳಕೆಯಾಗುವ ಅನುದಾನ. ಇದನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದ ಮಾಜಿ ಶಾಸಕರು, ತಕ್ಷಣ ನಗರಸಭೆಗೆ ಸಂಗ್ರಹವಾಗುವ ತೆರಿಗೆ, ಇನ್ನಿತರ ಆದಾಯದ ಕುರಿತು ಜಿಲ್ಲಾಧಿಕಾರಿಗಳಿಗೆ ಹ್ಯಾಂಡ್ ಓವರ್ ಮಾಡಿ ನೂತನ ಶಾಸಕರ ಕಚೇರಿಗೆ ನೀಡಿದ ಹಣವನ್ನು ವಾಪಾಸು ಪಡೆಯಬೇಕು. ಇಲ್ಲದಿದ್ದಲ್ಲಿ ಬಿಜೆಪಿ ವತಿಯಿಂದ ನಗರಸಭೆ ಎದುರು ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಸರಕಾರ ಬಂದು ನೂರು ದಿನಗಳು ಪೂರೈಸುತ್ತಿದ್ದು, ತರಕಾರಿ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ಜನಸಾಮಾನ್ಯರನ್ನು ತತ್ತರಿಸುವಂತೆ ಮಾಡಿದೆ. ಇನ್ನೊಂದೆ ಉಚಿತ ವಿದ್ಯುತ್ ಬಿಲ್‍ ವಿಚಾರದಲ್ಲಿ ಒಂದೆಡೆ ದರೋಡೆ ಮಾಡಿ ಇನ್ನೊಂದೆಡೆ ನೀಡುವ ಹಂತಕ್ಕೆ ಸರಕಾರ ತಲುಪಿದೆ. ಕಾಂಗ್ರೆಸ್ ಸರಕಾರದ ಬಂದರೆ ಬರ ನಿಶ್ಚಿತ, ಬಿಜೆಪಿ ಅಧಿಕಾರಕ್ಕೆ ಬಂದರೆ, ಮಳೆ, ಬೆಳೆ ನಿಶ್ಚಿತ ಎಂದು ಲೇವಡಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಮುಖಂಡರಾದ ಪುರುಷೋತ್ತಮ ಮುಂಗ್ಲಿಮನೆ, ಯುವರಾಜ ಪೆರಿಯತ್ತೋಡಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top