ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನಲ್ಲಿ ಖಾಲಿ ಹುದ್ದೆಗಳು | ಅರ್ಜಿ  ಎಲ್ಲಿದೆ ? ಹೇಗೆ ಅರ್ಜಿ ಸಲ್ಲಿಸಬಹುದು ? ಕೊನೆಯ ದಿನಾಂಕದ ಕುರಿತು ಇಲ್ಲಿದೆ ಡಿಟೈಲ್ಸ್

ಪುತ್ತೂರು: ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ ನಲ್ಲಿ ಖಾಲಿ ಇರುವ ಈ ಕೆಳಗಿನ ಹುದ್ದೆಗಳನ್ನು ನೇರ ನೇಮಕಾತಿಯಿಂದ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕಂಪ್ಯೂಟರ್ ಪ್ರೋಗ್ರಾಮರ್ 2 ಹಾಗೂ ದ್ವಿತೀಯ ದರ್ಜೆ ಗುಮಾಸ್ತರು 123 ಹೀಗೆ ಒಟ್ಟು 124 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ದ್ವಿತೀಯ ದರ್ಜೆ ಗುಮಾಸ್ತರ ಹುದ್ದೆಗೆ ನೀಡಲಾಗಿರುವ ಮೀಸಲಾತಿ ವಿವರ ಈ ಕೆಳಗಿನಂತಿದೆ.

ಪರಿಶಿಷ್ಟ ಜಾತಿ ಒಟ್ಟು 18 ಹುದ್ದೆಗಳಿದ್ದು, ಮಹಿಳೆಯರಿಗೆ 6, ಮಾಜಿ ಸೈನಿಕರು 1, ಪರಿಶಿಷ್ಟ ಪಂಗಡ ಒಟ್ಟು 4, ಮಹಿಳೆ 1, ಪ್ರವರ್ಗ 1 ಒಟ್ಟು 5, ಮಹಿಳೆ 2, ಪ್ರವರ್ಗ 11ಎ ಒಟ್ಟು 18, ಮಹಿಳೆ 6, ಮಾಜಿ ಸೈನಿಕರು 1 ಪ್ರವರ್ಗ 11ಬಿ ಒಟ್ಟು 5, ಮಹಿಳೆ 2, ಪ್ರವರ್ಗ 111ಎ ಒಟ್ಟು 5, ಮಹಿಳೆ 2, ಪ್ರವರ್ಗ 111ಬಿ ಒಟ್ಟು 6 ಮಹಿಳೆ 2, ಸಾಮಾನ್ಯ 62, ಮಹಿಳೆ 19, ಮಾಜಿ ಸೈನಿಕರು 6, ಅಂಗವಿಕಲರು 3































 
 

ಅರ್ಜಿ ಫಾರಂಗಳನ್ನು ಹಾಗೂ ಇತರ ವಿವರಗಳನ್ನು ಬ್ಯಾಂಕ್‍ನ ವೆಬ್‍ಸೈಟ್  www.scdccbank.com ನಿಂದ ಪಡೆಯಬಹುದು. ಅಭ್ಯರ್ಥಿಗಳು ಮೊದಲು ವೆಬ್‍ಸೈಟ್‍ನಲ್ಲಿ ಲಭ್ಯವಾಗುವ ಅರ್ಜಿ ಫಾರಂಗಳನ್ನು ಭರ್ತಿ ಮಾಡಿ ಆನ್‍ಲೈನ್ ಮೂಲಕ ಸಲ್ಲಿಸತಕ್ಕದ್ದು. ಅರ್ಜಿಯ ಮುದ್ರಿತ ಪ್ರತಿಯನ್ನು ತೆಗೆದು ತಮ್ಮ ಸಹಿ ಹಾಕಿ ಇತ್ತೀಚಿನ ಭಾವಚಿತ್ರ ಲಗತ್ತಿಸಿ, ಅರ್ಜಿಯಲ್ಲಿ ತಿಳಿಸಿರುವ ಎಲ್ಲಾ ಪ್ರಮಾಣ ಪತ್ರಗಳ ಪ್ರತಿಗಳೊಂದಿಗೆ ಸೆ.20 ರ ಅಪರಾಹ್ನ 4.30 ರ ಒಳಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ ನಿ. ಕೊಡಿಯಾಲ್ಬೈಲು, ಮಂಗಳೂರು -575003  ಇವರಿಗೆ ತಲುಪುವಂತ ಸಲ್ಲಿಸತಕ್ಕದ್ದು. ಈಗಾಗಲೇ ಸೇವೆಯಲ್ಲಿರುವ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸಂಬಂಧಪಟ್ಟ ಸಂಸ್ಥೆಯ ಮೂಲಕ ಸಲ್ಲಿಸತಕ್ಕದ್ದು. ಅಪೂರ್ಣ ಅರ್ಜಿಗಳನ್ನು ಹಾಗೂ ಕೊನೆ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿ ಶುಲ್ಕ ಪಾವತಿಸದ ಅರ್ಜಿಗಳು ಸಿಂಧುವಾಗಿರುವುದಿಲ್ಲ.  ಲಿಖಿತ ಪರೀಕ್ಷೆ ಹಾಗೂ ಸಂದರ್ಶನಕ್ಕೆ ಕರೆದಲ್ಲಿ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲೇ ಹಾಜರಾಗತಕ್ಕದ್ದು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top