ಧರ್ಮಸ್ಥಳ : ಹನ್ನೊಂದು ವರ್ಷಗಳ ಹಿಂದೆ ಬೆಳ್ತಂಗಡಿಯಲ್ಲಿ ನಡೆದ ಕೊಲೆ ಪ್ರಕರಣದ ನೈಜ ಆರೋಪಿಗಳ ಪತ್ತೆಗಾಗಿ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಭಾನುವಾರ ವಿಶ್ವಹಿಂದೂ ಪರಿಷತ್ ಬಜರಂಗದಳದ ನೇತೃತ್ವದಲ್ಲಿ ನಡೆದ ಪಾದಯತ್ರೆ ಬಳಿಕ ಧರ್ಮಸ್ಥಳದ ಅಣ್ಣಪ್ಪ ಬೆಟ್ಟದ ಮಂಭಾಗ ಪ್ರಮಾಣ ಮಾಡದೇ ಕೇವಲ ಪ್ರಾರ್ಥನೆ ಮಾತ್ರ ನಡೆಯಿತು.
ಪ್ರಕರಣದಲ್ಲಿ ಸೌಜನ್ಯ ತಾಯಿ ಕುಸುಮಾವತಿ ಅವರು ಮೂರು ಹೆಸರುಗಳನ್ನು ಬಹಿರಂಗಪಡಿಸಿದ್ದು, ಧೀರಜ್ ಕೆಲ್ಲ, ಉದಯ್ ಜೈನ್ ಹಾಗೂ ಧೀರಜ್ ಜೈನ್ ಎಂದು ಹೇಳಿದ್ದರು. ಈ ನಿಟ್ಟಿನಲ್ಲಿ ಇಂದು ಅಣ್ಣಪ್ಪ ಬೆಟ್ಟದಲ್ಲಿ ಪ್ರಮಾಣಕ್ಕೆ ಮೂವರು ಒಪ್ಪಿದ್ಧಾರೆ. ಆದರೆ ಪ್ರಮಾಣದ ಬದಲು ಕೇವಲ ಪ್ರಾರ್ಥನೆ ಮಾತ್ರ ನಡೆದಿದ್ದು, ಪ್ರಮಾಣ ಹಾಗೂ ಪ್ರಾರ್ಥನೆಗೆ ವ್ಯತ್ಯಾಸ ಇಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.
ಯಾವುದೇ ಒಂದು ಕ್ಷೇತ್ರದಲ್ಲಿ ಪ್ರಮಾಣ ಮಾಡುವುದಾದರೂ ಆ ಕ್ಷೇತ್ರದ ಮೊಕ್ತೇಸರ ಅಥವಾ ಧರ್ಮಾಧಿಕಾರಿಗಳು, ಅರ್ಚಕರ ಸಮ್ಮುಖದಲ್ಲಿ ನಡೆಯಬೇಕು. ಅದನ್ನು ಹೊರತುಪಡಿಸಿ ಬೀದಿಯಲ್ಲಿ ಬೇಕಾಬಿಟ್ಟಿಯಾಗಿ ಪ್ರಮಾಣ ಮಾಡಲು ಸಾಧ್ಯವಿಲ್ಲ. ಆದರೆ ಇಂದು ಅಣ್ಣಪ್ಪ ಬೆಟ್ಟದಲ್ಲಿ ನಡೆದದ್ದು ಕೇವಲ ಪ್ರಾರ್ಥನೆ ಎಂದು ಜನರು ಆಡಿಕೊಳ್ಳುವಂತಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.