ಪುತ್ತೂರು : ಪುತ್ತೂರು ಠಾಣೆಯ ಬಳಿ ಯುವಕನಿಂದ ಚೂರಿ ಇರಿತಕ್ಕೊಳಕ್ಕಾಗಿ ಹತ್ಯೆಯಾದ ವಿಟ್ಲದ ಕುದ್ದುಪದವಿನ ಗೌರಿ ಮನೆಗೆ ಪುತ್ತಿಲ ಪರಿವಾರ ಭೇಟಿ ನೀಡಿ ದುಃಖತಪ್ತ ಹೆಚ್ಚವರಿಗೆ ಹಾಗೂ ಕುಟುಂಬ ವರ್ಗಕ್ಕೆ ಸಾಂತ್ವನ ತಿಳಿಸಿದೆ.
ಆಗಸ್ಟ್ 24 ರಂದು ಪುತ್ತೂರಿನಲ್ಲಿ ಠಾಣೆಯ ಬಳಿಯೇ ಯುವಕನಿಂದ ಹತ್ಯೆ ನಡೆದಿತ್ತು. ಹತ್ಯೆಯಾದ ಯುವತಿ ಗೌರಿ ಮನೆಗೆ ಅರುಣ್ ಪುತ್ತಿಲ ಭೇಟಿ ನೀಡಿ ತಂದೆ ತಾಯಿ ಸಹೋದರಿಗೆ ಸಾಂತ್ವನ ಹೇಳಿದರು.
2 ವರ್ಷದ ಹಿಂದೆಯೇ ಈ ಯುವಕ ಗೌರಿಗೆ ತೊಂದರೆ ಕೊಟ್ಟ ಬಗ್ಗೆ ಠಾಣೆಯಲ್ಲಿ ಕೇಸ್ ಕೊಟ್ಟಿದ್ದರು ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಗಂಭೀರ ವಿಷಯವನ್ನು ಹೆತ್ತವರು ಈ ಸಂದರ್ಭ ಹೇಳಿದರು. ಯುವತಿ ಕೆಲಸ ಮಾಡುತ್ತಿದ್ದಲ್ಲಿಗೆ ಹಲವು ಕಡೆ ಹೋಗಿ ಆರೋಪಿ ಯುವಕ ತೊಂದರೆ ಕೊಡುತ್ತಿದ್ದ ಎಂದು ಹೆತ್ತವರು ಹೇಳಿದರು. ಮುಂದೆಯೂ ಈತನಿಂದ ನಮ್ಮ ಕುಟುಂಬಕ್ಕೆ ತೊಂದರೆಯಿದೆ ಎಂದು ಹೆತ್ತವರು ಈ ಸಂದರ್ಭ ಹೇಳಿದರು.
ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಮತ್ತು ಕುಟುಂಬದ ಆಧಾರ ಸ್ತಂಭವಾಗಿದ್ದ ಮಗಳ ಹತ್ಯೆಯಿಂದ ಬಡ ಕುಟುಂಬ ನೊಂದಿದ್ದು ಸರಕಾರ ಸೂಕ್ತ ಪರಿಹಾರ ಘೋಷಿಸಬೇಕೆಂದು ಅರುಣ್ ಪುತ್ತಿಲ ಪೊಲೀಸ್ ವರಿಷ್ಠಾಧಿಕಾರಿಯವರಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪುತ್ತಿಲ ಪರಿವಾರದ ಪ್ರಮುಖರಾದ ರಘುನಾಥ ಶೆಟ್ಟಿ, ಅನಿಲ್ ತೆಂಕಿಲ, ಶ್ರೀಕೃಷ್ಣ ವಿಟ್ಲ, ಶರತ್ ಜೊತೆಗಿದ್ದರು.