ಮಂಗಳೂರು : ಕರಾವಳಿ ಸಹಿತ ನಾಡಿನೆಲ್ಲೆಡೆ ಇಂದು ಸಂಭ್ರಮ ಸಡಗರದಿಂದ ಶ್ರೀ ವರಮಹಾಲಕ್ಷ್ಮೀ ಹಬ್ಬಾಚರಣೆ ಭರದಿಂದ ಸಾಗುತ್ತಿದೆ.

ಮಂಗಳೂರು ನಗರದ ಕಾವೂರಿನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠ ದಲ್ಲಿ ಕೂಡಾ ಇಂದು ವರಮಹಾಲಕ್ಷ್ಮಿ ಪೂಜೆಯನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.

ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಶ್ರೀಗಳ ದಿವ್ಯ ಹಸ್ತದಲ್ಲಿ ಶ್ರೀ ದೇವರಿಗೆ ವಿಶೇಷ ಅಂಲಂಕಾರ ನಡೆಸಲಾಗಿತ್ತು. ಭಕ್ತಾದಿಗಳು ಈ ಸಂಭ್ರಮವನ್ನು ಕಣ್ಣುಂಬಿಕೊಂಡರು