ಪುತ್ತೂರು: ಪುತ್ತೂರು ನಾಥಪಂಥೀಯ ಜೋಗಿ ಸಮಾಜ ಸುಧಾರಕ ಸಂಘದ ವತಿಯಿಂದ 4ನೇ ವರ್ಷದ ಕೆಸರುಗದ್ದೆ ಕ್ರೀಡೋತ್ಸವ ಆ.27 ಭಾನುವಾರ ಮುಗೇರಡ್ಕ ಲೀಲಾವತಿ ವಿಶ್ವನಾಥ ಜೋಗಿ ಅವರ ಕೆಸರುಗದ್ದೆಯಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಮೋನಪ್ಪ ಪುರುಷ ಮುಗೇರಡ್ಕ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನಮ್ಮ ಸಂಘ ವ್ಯಾಪ್ತಿಗೆ ಪುತ್ತೂರು, ಕಡಬ, ಬೆಳ್ತಂಗಡಿ, ಸುಳ್ಯ ಬರುತ್ತಿದ್ದು, ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಂತೆ ಕಾಸರಗೋಡು, ಮಂಗಳೂರು, ಬಂಟ್ವಾಳ, ವಿಟ್ಲ ಮುಡಿಪು, ಉಡುಪಿ, ಕುಂದಾಪುರ ಹಾಗೂ ಕರ್ನಾಟಕದ ಇತರ ಜಿಲ್ಲೆಗಳ ತಂಡಗಳಿಗೆ ಈಗಾಗಲೇ ಆಹ್ವಾನ ನೀಡಲಾಗಿದೆ ಎಂದರು.
ಕ್ರೀಡಾಕೂಟದ ಅಂಗವಾಗಿ ನಿಧಿಶೋಧ, ಪುರುಷರಿಗೆ 100 ಓಟ, ಮೀ., 200 ಮೀ. ಓಟ, ಹಗ್ಗಜಗ್ಗಾಟ, ವಾಲಿಬಾಲ್, ಮಹಿಳೆಯರಿಗೆ 100 ಮೀ., 200 ಮೀ., ಹಗ್ಗಜಗ್ಗಾಟ, ತ್ರೋಬಾಲ್. ಮಡಕೆ ಒಡೆಯುವುದು. ಮಕ್ಕಳಿಗೆ 100 ಮೀ. ಓಟ, 200 ಮೀ., ಬಾಲ್ ಎಸೆತ ಮಡಕೆ ಒಡಯುವುದು ಮತ್ತಿತ ವಿಭಾಗದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಸಂಚಾಲಕ ದಯಾನಂದ ಮುಗೇರಡ್ಕ, ಸದಸ್ಯರಾದ ಉಮೇಶ್ ಪುರುಷರಕಟ್ಟೆ, ಹರೀಶ್ಚಂದ್ರ, ನವೀನ್ ಉಪಸ್ಥಿತರಿದ್ದರು.