ಪುತ್ತೂರು: ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಂಚಿ ಘಟಕದ ವತಿಯಿಂದ ಸೆ.3 ರಂದು ನಡೆಯುವ ಹಿಂದೂ ಜಗಜಾಗೃತಿ ಸಮಾವೇಶದ ಕರಪತ್ರ ಬಿಡುಗಡೆ ಮಾಡಲಾಯಿತು.

ಮಂಚಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಲಿದ್ದು, ಸಮಾವೇಶದ ಕರಪತ್ರ ಹಾಗೂ ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ಸ್ಟಿಕ್ಕ ರ್ ನ್ನು ಮಂಚಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಬಜರಂಗದಳ ಪ್ರಮುಖ ಮಿಥುನ್ ಕಲ್ಲಡ್ಕ, ವಿಹಿಂಪ ಬಜರಂಗದಳ ಮಂಚಿ ಘಟಕದ ಕಾರ್ಯಕರ್ತರು ಉಪಸ್ಥಿತರಿದ್ದರು.