ವಿಧಾನಭೆಯ ಗ್ರಂಥಾಲಯವನ್ನು ಇತರೆ ಗ್ರಂಥಾಲಯಕ್ಕೆ ` ಇ’ ಸಂಪರ್ಕ ವ್ಯವಸ್ಥೆ ಕಲ್ಪಿಸುವಂತೆ ಗ್ರಂಥಾಲಯ ಸಮಿತಿ ಅಧ್ಯಕ್ಷರಿಗೆ ಶಾಸಕ ಅಶೋಕ್ ರೈ ಮನವಿ

ಪುತ್ತೂರು: ಬೆಂಗಳೂರು ವಿಧಾನಸಭೆಯಲ್ಲಿರುವ ಗ್ರಂಥಾಲಯದ ಜೊತೆ ರಾಜ್ಯದ ಇತರೆ ಸರಕಾರಿ ಗ್ರಂಥಾಲಯಕ್ಕೆ ಇ ಸಂಪರ್ಕ ವ್ಯವಸ್ಥೆ ಕಲ್ಪಿಸುವಂತೆ ಗ್ರಂಥಾಲಯ ಸಮಿತಿಯ ಸದಸ್ಯ ಪುತ್ತೂರು ಶಾಸಕ ಅಶೋಕ್ ರೈ ಗ್ರಂಥಾಲಯ ಸಮಿತಿ ಅಧ್ಯಕ್ಷ , ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಯವರಿಗೆ ಮನವಿ ಸಲ್ಲಿಸಿದರು.

ವಿಧಾನಸಭೆಯ ಮೊದಲನೇ ಮಹಡಿಯಲ್ಲಿರುವ ವಿಧಾನಸಭಾ ಗ್ರಂಥಾಲಯದ ಗ್ರಂಥಾಲಯ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದ ಶಾಸಕರು ಸಮಿತಿಯ ಅಧ್ಯಕ್ಷರ ಜೊತೆ ಇ ಸಂಪರ್ಕದ ಬಗ್ಗೆ ಮಾತುಕತೆ ನಡೆಸಿ, ವಿಧಾನಸಭಾ ಗ್ರಂಥಾಲಯದಲ್ಲಿ ಅತ್ಯಂತ ಹಳೆಯ ಮೌಲ್ಯಯುತವಾದ ಮತ್ತು ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹದಾಯಕವಾದ ಸಾವಿರಾರು ಪುಸ್ತಕಗಳಿದ್ದು ಈ ಪುಸ್ತಕವನ್ನು ಖರೀದಿ ಮಾಡಲು ಸಾಧ್ಯವಿಲ್ಲ ಅವುಗಳ ಪ್ಯಕಿ ಕೆಲವೊಂದು ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲದೇ ಇರಬಹುದು. ಭಾರತದ ಆಡಳಿತಾತ್ಮಕ ವಿಷಯಗಳ ಮಾಹಿತಿ ಹಾಗೂ ದೇಶದ ಕಾನೂನು ವಿಚಾರಗಳ ಮಾಹಿತಿಯನ್ನೊಳಗೊಂಡ ಅತ್ಯಮೂಲ್ಯವಾದ ಪುಸ್ತಕಗಳಿದ್ದು ಅವುಗಳನ್ನು ಇ ವ್ಯವಸ್ಥೆ ಮೂಲಕ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಮಾಡಬೇಕಿದೆ. ರಾಜ್ಯಾದ್ಯಂತ ಇರುವ ಗ್ರಂಥಾಲಯಗಳಿಗೆ ಪುಸ್ತಕಗಳ ಇ ಸಂಪರ್ಕ ವ್ಯವಸ್ಥೆ ಮಾಡಿದ್ದಲ್ಲಿ ಕಾನೂನು ವಿದ್ಯಾರ್ಥಿಗಳು, ಇತಿಹಾಸ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಪುಸ್ತಕದಲ್ಲಿರುವ ಮಾಹಿತಿಯನ್ನು ಕಲಿಯಬಹುದಾಗಿದೆ. ಪುಸ್ತಕಗಳನ್ನು ಓದಬೇಕಾದರೆ ವಿದ್ಯಾರ್ಥಿಗಳಿಗೆ ಸುಲಭ ವಿಧಾನದಲ್ಲಿ ದೊರೆಯುವಂತಾಗಲು ಇ ವ್ಯವಸ್ಥೆಯನ್ನು ಕಲ್ಪಿಸಬೇಕಿದೆ. ಇ ವ್ಯವಸ್ಥೆ ಮಾಡಿದಲ್ಲಿ ಯುವ ಜನಾಂಗಕ್ಕೆ ಅದರಿಂದ ತುಂಬಾ ಪ್ರಯೋಜನವಾಗಬಹುದಾಗಿದ್ದು ರಾಜ್ಯಾದ್ಯಂತ ಎಲ್ಲಾ ಗ್ರಂಥಾಲಯ ಮತ್ತು ಕಾನೂನು ಕಾಲೇಜುಗಳ ಗ್ರಂಥಾಲಯದ ಜೊತೆ ಇ ಸಂಪರ್ಕ ವನ್ನು ಕಲ್ಪಿಸುವಂತೆ ಮನವಿ ಮಾಡಿದರು. ಈಗಾಗಲೇ ಇ ಸಂಪರ್ಕ ಇದ್ದರೂ ಅವುಗಳಲ್ಲಿ ಕೆಲವೊಂದು ಪುಸ್ತಗಳನ್ನು ಮಾತ್ರ ಓದಬಹುದಾಗಿದ್ದು ಎಲ್ಲಾ ಪುಸ್ತಕಗಳನ್ನು ಓದುವ ಅಥವಾ ದೊರೆಯುವ ವ್ಯವಸ್ಥೆಯನ್ನು ಮಾಡುವಂತೆ ಬಸವರಾಜ ಹೊರಟ್ಟಿಯವರಿಗೆ ಮನವಿ ಮಾಡಿದ್ದಾರೆ. ಶಾಸಕರ ಮನವಿಗೆ ಅಧ್ಯಕ್ಷರು ಪೂಕರವಾಗಿ ಸ್ಪಂದಿಸಿದ್ದು ರಾಜ್ಯದ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಇ ವ್ಯವಸ್ಥೆಗಳನ್ನು ಕಲ್ಪಿಸುವ ಬಗ್ಗೆ ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.

ಈಸಂದರ್ಭದಲ್ಲಿ ಗ್ರಂಥಾಲಯ ಸಮಿತಿ ಸದಸ್ಯರುಗಳಾದ ವಿಧಾನಸಭೆಯ ಅಧ್ಯಕ್ಷ ಯು ಟಿ ಖಾದರ್, ಮಾನೆ ಶ್ರೀನಿವಾಸ್, ಸಿ ಬಿ ಸುರೇಶ್ ಬಾಬು, ಪ್ರಿಯಕೃಷ್ಣ, ಉದಯ ಬಿ ಗರುಡಾಚಾರ್, ಅಡಗೂರು ಎಚ್ ವಿಶ್ವನಾಥ, ಯು ಬಿ ವೆಂಕಟೇಶ್ ಸಿ ಎನ್ ಮಂಜೇಗೌಡರು ಉಪಸ್ತಿತರಿದ್ದರು.      































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top