ಮುಂದಿನ ಒಂದೂವರೆ ತಿಂಗಳಲ್ಲಿ 94ಸಿ, 94ಸಿಸಿ ಎಲ್ಲಾ ಕಡತಗಳು ವಿಲೇವಾರಿಯಾಗಬೇಕು : ಕಂದಾಯ ಅಧಿಕಾರಿಗಳಿಗೆ ಶಾಸಕರ ಸೂಚನೆ | ತಾಲೂಕು ಮಟ್ಟದ ಕಂದಾಯ ಅಧಿಕಾರಿಗಳ ಸಭೆ

ಪುತ್ತೂರು : ತಾಲೂಕಿನಲ್ಲಿ 94ಸಿ, 94ಸಿಸಿ, ಅಕ್ರಮ-ಸಕ್ರಮ ಕಡತಗಳು ಬಹುತೇಕ ವಿಲೇವಾರಿಗೆ ಬಾಕಿಯಿದ್ದು, ಮುಂದಿನ ಒಂದೂವರೆ ತಿಂಗಳಲ್ಲಿ ಎಲ್ಲಾ ಕಡತಗಳ ವಿಲೇವಾರಿಯಾಗಬೇಕು ಎಂದು ಕಂದಾಯ ಅಧಿಕಾರಿಗಳಿಗೆ ಕಡಕ್ ಸೂಚನೆ ನೀಡಿದ್ದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ.

ಬುಧವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕಿನ ಕಂದಾಯ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

ಕಂದಾಯ ಇಲಾಖೆಯಲ್ಲಿ ಹತ್ತಾರು ಸಮಸ್ಯೆಗಳಿದ್ದು, ಅವುಗಳನ್ನು ಶೀಘ್ರ ಸರಿಪಡಿಸಬೇಕಾಗಿದೆ ಎಂದು ತಿಳಿಸಿದರು.































 
 

ತಾಲೂಕಿನಲ್ಲಿ ಸುಮಾರು 2438 94 ಸಿ ಹಾಗೂ 518 94ಸಿಸಿ ಕಡತಗಳು ವಿಲೇವಾರಿಯಾಗಲು ಬಾಕಿಯಿದೆ. ಇದರ ಸಂಪೂರ್ಣ ವಿಲೇವಾರಿಗೆ ಡೆಡ್ ಲೈನ್ ಫಿಕ್ಸ್ ಮಾಡಬೇಕಾಗಿದೆ. ಯಾವ ರೀತಿ ಕಡತಗಳನ್ನು ವಿಲೇವಾರಿ ಮಾಡಬಹುದು ಎಂದು ಸಹಾಯಕ ಆಯುಕ್ತ ಗಿರೀಶ್ ನಂದನ್ ಹಾಗೂ ತಹಶೀಲ್ದಾರ್ ಶಿವಶಂಕರ್ ಅವರಲ್ಲಿ ಚರ್ಚಿಸಿದರು.

ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ, ಗ್ರಾಮವಾರು ಯಾಕೆ ಪಟ್ಟಿ ಮಾಡಿಲ್ಲ ಎಂದು ತಾಲೂಕು ಕಚೇರಿ ಸಿಬ್ಬಂದಿ ಕೆಂಪರಾಜ್ ಅವರಲ್ಲಿ ಕೇಳಿದರು. ಯಾವ್ಯಾವ ಗ್ರಾಮದಲ್ಲಿ ಎಷ್ಟೆಷ್ಟು ಕಡತಗಳು ಬಾಕಿಯಿದೆ, ಯಾರಿಗೆಲ್ಲಾ ಹೆಚ್ಚುವರಿ ಗ್ರಾಮಗಳ ಜವಾಬ್ದಾರಿ ಇದೆ ಎಂದು ಕೇಳಿದರು. ಟಾರ್ಗೆಟ್ ಕೊಟ್ಟು ಸಾಕಾಗಿದೆ. ಹಲವು ಬಾರಿ ಹೇಳಿದ್ದೇನೆ. ಯಾರಿಗೆಲ್ಲಾ ಹೆಚ್ಚುವರಿ ಗ್ರಾಮದ ಜವಾಬ್ದಾರಿಯಿದೆ ಅವರಿಗೆ ಹೆಚ್ಚಿನ ಸಮಯಾವಕಾಶ ನೀಡಿದರು.

ಪ್ಲಾಟಿಂಗ್ ದೊಡ್ಡ ಸಮಸ್ಯೆಯಾಗಿದ್ದು, ಈ ಕುರಿತು ಬೇರೆಯವರಿಗೆ ಚಾರ್ಜ್‍ನೀಡಿ ಎಂದು ಶಾಸಕರು ಆಯುಕ್ತರಿಗೆ ಸೂಚನೆ ನೀಡಿದರು. ಅಲ್ಲದೆ ಫೈಲ್ ರಿಜೆಕ್ಟ್ ಮಾಡುವಾಗ ಸರಿಯಾಗಿ ನೋಡಿ ಮಾಡಬೇಕು ಎಂದು ತಿಳಿಸಿದರು.

94ಸಿಸಿಯಲ್ಲಿ 518 ಕಡತಗಳು ಬಾಕಿಯಿದ್ದು, ಈ ಪೈಕಿ 200 ತಾಲೂಕು ಕಚೇರಿಯಲ್ಲಿದೆ. ಉಳಿದದ್ದು ವಿಎಗಳ ಬಳಿಯಿದೆ. ಒಟ್ಟಾರೆಯಾಗಿ ಮುಂದಿನ ಒಂದೂವರೆ ತಿಂಗಳಲ್ಲಿ ಎಲ್ಲಾ ಕಡತಗಳು ವಿಎಗಳಿಂದ ತಾಲೂಕು ಕಚೇರಿಗೆ ಬಂದು ಕಡ್ಡಾಯ ವಿಲೇವಾರಿ ಆಗಬೇಕು ಎಂದು ಸೂಚನೆ ನೀಡಿದರು.

ಅಕ್ರಮ-ಸಕ್ರಮ ಕಡತಗಳು ಒಟ್ಟು 15588 ರಲ್ಲಿ 1309 ಕಡಗಳು ವಿಲೇವಾರಿಯಾಗಿದೆ. 13,349 ಬಾಕಿಯಿದೆ. ಈ ಪೈಕಿ 50 ಹಾಗೂ 53 ರಲ್ಲಿ ಯಾವುದೇ ಪೆಂಡಿಂಗ್ ಇಲ್ಲ. 57 ರಲ್ಲಿ ಬಾಕಿಯಿದೆ ಎಂದು ಅಧಿಕಾರಿಗಳು ತಿಳಿಸಿದಾಗ, ಪ್ರತಿಕ್ರಿಯಿಸಿದ ಶಾಸಕರು. ಪ್ರಸ್ತುತ ಮೊದಲಿನ ವ್ಯವಸ್ಥೆ ಅಲ್ಲ. ಹೊಸ ವ್ಯವಸ್ಥೆಗೆ ಒಗ್ಗಿಕೊಳ್ಳಬೇಕಾಗುತ್ತದೆ. ಮುಂದಿನ 15 ದಿನದಲ್ಲಿ ಅಕ್ರಮ-ಸಕ್ರಮ ಸಮಿತಿ ರಚನೆಯಾಗಲಿದೆ. ಮೂರು ತಿಂಗಳ ಒಳಗೆ ಅಕ್ರಮ-ಸಕ್ರಮ ಕಡತಗಳ ಪರಿಶೀಲನೆಯಾಗಿ ಎಂಟು ತಿಂಗಳ ಒಳಗೆ ಎಲ್ಲಾ ಸರಿಪಡಿಸಬೇಕಾಗಿದೆ ಎಂದು ತಿಳಿಸಿದರು.

ಎಲ್ಲಾ ಪ್ರಕ್ರಿಯೆಗಳನ್ನು ಕಾನೂನಾತ್ಮಕವಾಗಿ ಮಾಡಿ ಎಂದು ಸಹಾಯಕ ಆಯುಕ್ತರು ಸೂಚನೆ ನೀಡಿದರು.

ಪಿಂಚಣಿ ಸೇರಿದಂತೆ ಇನ್ನಿತರ ಕಡತಗಳು ಬಾಕಿ ಇದೆಯಾ ಎಂದು ಕೇಳಿದರು.

ಪ್ಲಾಟಿಂಗ್ ಸಮಸ್ಯೆ ದೊಡ್ಡಯಾಗಿದ್ದು, ಈ ಕುರಿತು ಅರ್ಜಿಗಳು ಬಾಕಿ ಇದೆಯಾ ಎಂದು ಕೇಳಿದರು. 255 ಅರ್ಜಿಗಳು ಬಾಕಿ ಇದೆ ಎಂದು ತಿಳಿಸಿದಾಗ ಈ ಕುರಿತು ಡಿಡಿಎಲ್‍ಆರ್, ಎಡಿಎಲ್‍ಆರ್ ಅವರಲ್ಲಿ ಚರ್ಚಿಸಿದರು.

ವೇದಿಕೆಯಲ್ಲಿ ಡಿಡಿಎಲ್‍ಆರ್ ಪ್ರಸಾದಿನಿ, ಎಡಿಎಲ್‍ಆರ್ ರಮಾದೇವಿ, ತಹಸೀಲ್ದಾರ್ ಶಿವಶಂಕರ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top