ದ.ಕ.ಜಿಲ್ಲೆ ತೆಂಗು ರೈತ ಉತ್ಪಾದಕರ ಸಂಸ್ಥೆಯಿಂದ ಗೆರಟೆ ಉತ್ಪನ್ನಗಳ ತರಬೇತಿ | ಪ್ರಗತಿ ಪರಿಶೀಲನಾ ಸಭೆ

ಪುತ್ತೂರು: ದ.ಕ.ಜಿಲ್ಲೆ ತೆಂಗು ರೈತ ಉತ್ಪಾದಕರ ಸಂಸ್ಥೆ ತೆಂಗಿನಕಾಯಿ ಗೆರಟೆಯ ಉತ್ಪನ್ನಗಳ ತಯಾರಿಕೆಗಾಗಿ ಅನೇಕ ತರಬೇತಿಗಳನ್ನು ನೀಡಿದ್ದು, ಅದರ ಪ್ರಗತಿ ಪರಿಶೀಲನಾ ಸಭೆ ಮಂಗಳೂರು ಕಾರ್ಪೋರೇಟ್ ಕಚೇರಿಯಲ್ಲಿ ನಡೆಯಿತು.

ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಸಂಸ್ಥೆಯು ತೆಂಗಿನ ಮೌಲ್ಯವರ್ಧನೆಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಅವುಗಳಲ್ಲಿ ಒಂದಾದ ತೆಂಗಿನಕಾಯಿಯ ಗೆರಟೆಯ ಉತ್ಪನ್ನಗಳ ತಯಾರಿಕೆಗಾಗಿ ಅನೇಕ ತರಬೇತಿಗಳನ್ನು ನೀಡಲಾಗಿದೆ.

ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ್ ಮತ್ತು ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಕಂಪನಿ ನಿಯಮಿತ ಅವರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.



































 
 

ಸಭೆಯಲ್ಲಿ ನಬಾರ್ಡ್ ನ ಎಜಿಎಂ ಸಂಗೀತ ಕರ್ತ, ಭಾರತೀಯ ವಿಕಾಸ್ ಟ್ರಸ್ಟ್ ಮಣಿಪಾಲ್ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್, ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಉತ್ಪಾದಕರ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕುಸುಮಾಧರ್ ಎಸ್ ಕೆ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೇತನ್ ಎ, NRLM ಯೋಜನೆಯ ತಾಲೂಕು ಮೇಲ್ವಿಚಾರಕಿ ನಳಿನಿ ಮತ್ತು ಕೋಡಿಂಬಾಡಿ ಹಾಗೂ ವಿಟ್ಲ ಪಡನೂರ್ ಗ್ರಾಮದ ತರಬೇತಿಯಲ್ಲಿ ಭಾಗವಹಿಸಿದ ಸಂಜೀವಿನಿ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

ತೆಂಗಿನ ಗೆರಟೆ ಕಲಾಕೃತಿ ತರಬೇತಿಯ ನಂತರ ಆದ ಬೆಳವಣಿಗೆ, ಮುಂದಿನ ಯೋಜನೆಗಳು, ಮಹಿಳೆಯರು ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top