ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವಿಟ್ಲ ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಕೆದಿಲ ಗ್ರಾಮದ ಎದುರ್ಕಳ ಕಿಂಡಿ ಆಣೆಕಟ್ಟಿನಲ್ಲಿ ಸಿಲುಕಿದ ಕಸ ಕಡ್ಡಿಗಳನ್ನು ತೆರವುಗೊಳಿಸಲಾಯಿತು.

ಮಳೆಗೆ ಮರ, ಬಿದಿರು, ಕಸ ಕಡ್ಡಿ ಕುಳಿತು ಮಳೆಯ ನೀರು ಸೇತುವೆಯಲ್ಲಿ ಹೋಗಲು ಕಷ್ಟ ಆಗುತಿದ್ದುದನ್ನು ಗಮನಿಸಿ . ನೀರಿನ ಪ್ರವಾಹವನ್ನು ಲೆಕ್ಕಿಸದೆ ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಕೆದಿಲ ಸದಸ್ಯರಾದ ಜಗದೀಶ, ಶೀನಪ್ಪ, ಗಿರೀಶ, ವೆಂಕಪ್ಪ, ಪುರಂದರ, ಸ್ವಚ್ಛತೆ ಮಾಡಿದರು.

ಈ ಸಂದರ್ಭದಲ್ಲಿ ಪೆರ್ನೆ ವಲಯ ಮೇಲ್ವಿಚಾರಕಿ ಶಾರದ, ಸಂಯೋಜಕಿ ಅಶ್ಮಿತಾ, ಸೇವಾಪ್ರತಿನಿಧಿ ಜಯಂತಿ ಉಪಸ್ಥಿತರಿದ್ದರು.