ಅಪರಿಚಿತನಿಂದ ಇಬ್ಬರು ಮಹಿಳೆಯರಿಗೆ ಹಲ್ಲೆ | ಹಲ್ಲೆ ನಡೆಸಿದ ಆರೋಪಿ ಪರಾರಿ

ಪುತ್ತೂರು: ಅಪರಿಚಿತ ವ್ಯಕ್ತಿಯೋರ್ವ ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಘಟನೆ ತಾಲೂಕಿನ ಬಡಗನ್ನೂರಿನಲ್ಲಿ ನಡೆದಿದೆ.

ಕೂಲಿ ಕೆಲಸ ಮಾಡುತ್ತಿರುವ ಗಿರಿಜಾ ಹಾಗೂ ಸುಲೇಖಾ ಹಲ್ಲೆಗೊಳಗಾದವರು. ಬಡಗನ್ನೂರು ಸಮೀಪದ ಗುಡ್ಡೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯರಿಬ್ಬರ ಮೇಲೆ ಅಪರಿಚಿತ ವ್ಯಕ್ತಿ ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ.

ಗಂಭೀರ ಗಾಯಗೊಂಡ ಮಹಿಳೆಯರನ್ನು ಈಶ್ವರಮಂಗಲದ ಹಿಂದೂ ಜಾಗರಣ ವೇದಿಕೆ ಆಂಬ್ಯುಲೆನ್ಸ್ ಮೂಲಕ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗಿದ್ದು, ಇಬ್ಬರಿಗೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.































 
 

ಗೋಳಿತ್ತೊಟ್ಟು ಮೂಲದ ಗಿರಿಜಾ ಬಡಗನ್ನೂರು ನಿವಾಸಿ ಸುಲೇಖ ರವರ ಮನೆಯಲ್ಲಿದ್ದುಕೊಂಡು ಕೂಲಿ ಕೆಲಸಕ್ಕೆ ತೆರಳುತ್ತಿದ್ದರೆನ್ನಲಾಗಿದೆ. ವಾರಕ್ಕೊಂದು ಬಾರಿ ತಮ್ಮ ಮನೆಗೆ ಹೋಗಿ ಬರುತ್ತಿದ್ದರು. ಸುಲೇಖ ಮಗನ ಜೊತೆ ವಾಸವಿದ್ದರು. ಇಂದು ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದ ಗುಡ್ಡಕ್ಕೆ ಆಗಮಿಸಿದ ಅಪರಿಚಿತ ವ್ಯಕ್ತಿ ಇಬ್ಬರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದು, ಸ್ಥಳೀಯ ನಿವಾಸಿಗಳು ಮಹಿಳೆಯರು ಗುಡ್ಡದಲ್ಲಿ ಬಿದ್ದಿರುವುದನ್ನು ಸುಲೇಖ ರವರ ಮಗನಿಗೆ ತಿಳಿಸಿದ್ದು, ಆತ ಆಗಮಿಸಿ ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಿದ್ದಾಗಿ ತಿಳಿದು ಬಂದಿದೆ. ಹಲ್ಲೆಗೆ ಕಾರಣ ತನಿಖೆಯ ಬಳಿಕವಷ್ಟೇ ತಿಳಿದುಬರಬೇಕಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top