ಕಾವೇರುತ್ತಿರುವ ಸೌಜನ್ಯ ಕೊಲೆ ಪ್ರಕರಣ | ಜಿಲ್ಲೆಯಾದ್ಯಂತ ಪ್ರತಿಭಟನೆ | ಜವಾಬ್ದಾರಿ ಸ್ಥಾನದಲ್ಲಿರುವ ಸಚಿವ ಜಿ.ಪರಮೇಶ್ವರ್ ಸಾವಿನ ತನಿಖೆ ಮುಗಿದಿದೆ ಎಂದು ಹೇಳಿಕೆ ನೀಡಿರುವುದು ಸರಿಯೇ? | ಹಾಗಾದರೆ ಪ್ರಕರಣದ ನೈಜ ಆರೋಪಿಗಳ ಪತ್ತೆಯಾಗದೇ ಇರುವುದು ತನಿಖಾಧಿಕಾರಿಗಳ ವೈಫಲ್ಯವೇ ? | ಹಾಗಾದರೇ ಸೌಜನ್ಯ ಸಾವಿಗೆ ನ್ಯಾಯ ದೊರಕಿಸಿಕೊಡುವವರು ಯಾರು?

ವಿಟ್ಲ: ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ ಶಾಂತಿನಗರ ವಿಟ್ಟ, ಯುವ ಘಟಕ ಹಾಗೂ ಮಹಿಳಾ ಸಂಘ, ಗೌಡರ ಸ್ವಸಹಾಯ ಸಂಘಗಳ ಒಕ್ಕೂಟ ಬಂಟ್ವಾಳ ವಲಯ ನೇತೃತ್ವದಲ್ಲಿ ಕುಮಾರಿ ಸೌಜನ್ಯಳ ಸಾವಿಗೆ ನ್ಯಾಯ ದೊರಕಿಸಿಕೊಡಲು ಹಕ್ಕೊತ್ತಾಯ ಮಾಡುವ ಬೃಹತ್ ಪ್ರತಿಭಟನಾ ಮೆರವಣಿಗೆಯು ಆ.19 ಬೆಳಿಗ್ಗೆ ವಿಟ್ಲದಲ್ಲಿ ನಡೆಯಿತು.

ಧರ್ಮಸ್ಥಳದ ಕುಮಾರಿ ಸೌಜನ್ಯಳ ಅತ್ಯಾಚಾರ ಹಾಗೂ ಕೊಲೆ ಮಾಡಿದ ನೈಜ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಅಲ್ಲಿಂದ ವಿಟ್ಲ ಜಂಕ್ಷನ್ ನಿಂದ ಖಾಸಗಿ ಬಸ್ಸು ನಿಲ್ದಾಣದವರೆಗೆ ಮೆರವಣಿಗೆ ನಡೆಯಿತು. ಬಳಿಕ ನಾಡ ಕಛೇರಿಯಲ್ಲಿ ಉಪ ತಹಶೀಲ್ದಾರರ ಮೂಲಕ ರಾಜ್ಯಪಾಲರು, ಮುಖ್ಯಮಂತ್ರಿ ಜಿಲ್ಲಾಧಿಕಾರಿ . ಹಾಗೂ ತಹಶೀಲ್ದಾರ್‌ರವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕ್ ಗೌಡರ ಯಾನೆ ಒಕ್ಕಲಿಗ ಸಂಘದ ಅಧ್ಯಕ್ಷ ಮೋನಪ್ಪ ಗೌಡ ಶಿವಾಜಿನಗರ, ಗೌರವ ಅಧ್ಯಕ್ಷ ಮೋಹನ ಕಾಯರ್ಮಾ‌, ಉಪಾಧ್ಯಕ್ಷರುಗಳಾದ ಕುಶಾಲಪ್ಪ ಗೌಡ ಇರಂದೂರು ಮತ್ತು ಬಾಲಕೃಷ್ಣ ಗೌಡ ಪೊಣ್ಣೆತ್ತಡಿ, ಕಾರ್ಯದರ್ಶಿ ವಿಶ್ವನಾಥ ಗೌಡ ವರಪ್ಪಾದೆ, ಹಿರಿಯರಾದ ಲಿಂಗಪ್ಪ ಗೌಡ ಅಳಿಕೆ, ಪದ್ಮಯ್ಯ ಗೌಡ ಪೈಸಾರಿ, ಪದ್ಮನಾಭ ಗೌಡ ಚಂದಪ್ಪಾಡಿ, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಗಿರಿನಿವಾಸ, ಯುವಘಟಕದ ಅಧ್ಯಕ್ಷರಾದ ದಿನೇಶ್ ದಿನೇಶ್ ಕುಮಾರ ಎಂ, ಕಾರ್ಯದರ್ಶಿ ವೇಣುಗೋಪಾಲ್ ಸಿ.ಯಚ್, ಮಹಿಳಾ ಘಟಕದ ಕಾರ್ಯದರ್ಶಿ ಜಯಲಕ್ಷ್ಮಿ ಅಳಿಕೆ, ಉಪಾಧ್ಯಕ್ಷರು ಧರ್ಣಮ್ಮ ಜಳಕದಗುಂಡಿ, ಧರ್ಮವತಿ ದೇವರಮನೆ, ಒಕ್ಕಲಿಗ ಸ್ವಸಹಾಯ ಸಂಘದ ವಲಯಧ್ಯಕ್ಷರಾದ ನಾರಾಯಣ ಗೌಡ ಓಟೆ, ಮೇಲ್ವಿಚಾರಕರು ಸುಮಲತಾ, ಪ್ರೇರಕಿ ಸ್ವಾತಿ, ಸಲಹೆಗರರಾದ ವೆಂಕಪ್ಪ ಗೌಡ ಪುತ್ತೂರು, ತಾಲೂಕ್ ಸಂಘದ ಕಾನೂನು ಸಲಹೆಗಾರ ಮಹೇಶ್ ಅಳಿಕೆ, ದಕ್ಷತ್ ಗೌಡ ಕಾಣಿಚ್ಚಾರುಗುತ್ತು, ಕೃಷ್ಣ ಮುದೂರು, ಸಿ.ಕೆ ಗೌಡ, ಈಶ್ವರಪ್ಪ ಗೌಡ, ಪುರುಷೋತ್ತಮ ಕೋಲ್ವೆ, ಪುರಂದರ ತಾಳಿಪಡು ಉಪಸ್ಥಿತರಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top