ಕಾರಣಿಕ ಕ್ಷೇತ್ರ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೋಣ ಶನಿವಾರದಂದು ವಿಶೇಷ ಪೂಜೆ, ಸೋಣ ಶನಿವಾರ ವೃತಧಾರಿಗಳಿಗೆ ಅನ್ನದಾನ | ಆ.21 : ನಾಗರ ಪಂಚಮಿ ಹಬ್ಬ

ಪುತ್ತೂರು: ಕಾರಣಿಕ ಕ್ಷೇತ್ರ ಆರ್ಯಾಪು ಗ್ರಾಮದ  ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ19, 26, ಸೆ.2, 9 ಹಾಗೂ ಸೆ.16 ರ ಶನಿವಾರದಂದು ವಿಶೇಷ ಪೂಜೆ ಹಾಗೂ ಸೋಣ ಶನಿವಾರದ ವೃತಧಾರಿಗಳಿಗೆ ಅನ್ನದಾನ ನಡೆಯಲಿದೆ.

ಈ ದಿನಗಳಲ್ಲಿ ಸರ್ವಸೇವೆ, ಮಹಾಪೂಜೆ, ಕ್ಷೀರಾಭಿಷೇಕ, ಬಲಿವಾಡು ಸೇವೆ, ಕಲಶಸ್ನಾನ, ಹೂವಿನ ಪೂಜೆ, ಎಳ್ಳೆಣ್ಣೆ ಸೇವೆ, ಕುಂಕುಮಾರ್ಚನೆ ಸೇವೆ ನಡೆಯಲಿದೆ.

ಅಲ್ಲದೆ ಪ್ರತಿ ವರ್ಷದಂತೆ ನಾಗರ ಪಂಚಮಿ ಹಬ್ಬ ಆ.21 ಸೋಮವಾರ ನಡೆಯಲಿದ್ದು, ಹಬ್ಬದ ಅಂಗವಾಗಿ ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 12 ರ ತನಕ ಕ್ಷೇತ್ರದ ನಾಗಸನ್ನಿಧಿಯಲ್ಲಿ ಕ್ಷೀರಾಭಿಷೇಕ, ನಾಗತಂಬಿಲ, ಪಂಚಾಮೃತಾಭಿಷೇಕ, ನಾಗಪೂಜೆ ಸೇವೆ ನಡೆಯಲಿದೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ರಾವ್ ಆರ್ಯಾಪು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7019216390 ಸಂಪರ್ಕಿಸಬಹುದು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top