ವಿಟ್ಲ: ವಿಟ್ಲ ತಾಲೂಕು ಮಟ್ಟದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರ ತರಬೇತಿ ಕಾರ್ಯಕ್ರಮ ವಿಟ್ಲ ಯೋಜನಾ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಅಖಿಲ ಕರ್ನಾಟಕ ಜನ ಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕ ವಿವೇಕ ವಿನ್ಸೆಂಟ್ ಪಾಯ್ಸ್ ಮಾತನಾಡಿ, ಆಕಸ್ಮಿಕವಾಗಿ ವಿಪತ್ತು ಬರುತ್ತದೆ. ಅಂತಹ ಸಂದರ್ಭದಲ್ಲಿ ಎಲ್ಲೋ ದೂರದಲ್ಲಿರುವ ಸಹಾಯಕರನ್ನು ಕರೆದು ಬರುವಾಗ ಅವಗಡದ ತೀವ್ರತೆ ಹೆಚ್ಚಾಗಿ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚು. ಆಗ ಆಪದ್ಬಾಂಧವರಾಗಿ ಸಹಾಯಕ್ಕೆ ಬರುವವರೇ ಧರ್ಮಸ್ಥಳ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಸದಸ್ಯರು. ಆದ್ದರಿಂದ ಅಂತ ಸದಸ್ಯರಿಗೆ ಪ್ರಾಥಮಿಕ ಹಂತದಲ್ಲಿಯೇ ಸೂಕ್ತ ತರಬೇತಿ ನೀಡುವುದು ಅಗತ್ಯಎಂದರು.
ಬಂಟ್ವಾಳ ತಾಲೂಕು ಜನಜಾಗ್ರತಿ ವೇದಿಕೆ ಅಧ್ಯಕ್ಷ ರೊನಾಲ್ಡ್ ಡಿಸೋಜಾ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಗತಿ ಬಂದು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ನವೀನ್ ಚಂದ್ರ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಶೌರ್ಯ ತಂಡದ ನಿರ್ಣಯ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಕಳೆದ ವರ್ಷದ ಅವಧಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ತಂಡವನ್ನು ಗುರುತಿಸಲಾಯಿತು. ಪ್ರಥಮ ಸ್ಥಾನವನ್ನು ಕಲ್ಲಡ್ಕ ವಲಯ, ಹಾಗೂ ದ್ವಿತೀಯ ಸ್ಥಾನವನ್ನು ಪೆರ್ನೆ ವಲಯ, ಮತ್ತು ತೃತೀಯ ಸ್ಥಾನವನ್ನು ವಿಟ್ಲ ವಲಯ ಪಡಕೊಂಡಿತು,
ದಕ್ಷಿಣ ಕನ್ನಡ, ಉಡುಪಿ ನಿರ್ದೇಶಕ ಪ್ರವೀಣ್ ಕುಮಾರ್, ವಿಟ್ಲ ವಲಯ ಜನಜಾಗೃತಿ ವೇದಿಕೆ ವಲಯ ಅಧ್ಯಕ್ಷ ವಿಟ್ಲ ಅರಮನೆ ಕೃಷ್ಣಯ್ಯ ಕೆ. ಮತ್ತಿತರರು ಭಾಗವಹಿಸಿದ್ದರು ವಿಟ್ಲ ತಾಲೂಕು ಯೋಜನಾಧಿಕಾರಿ ಚೆನ್ನಪ್ಪ ಗೌಡ ಸ್ವಾಗತಿಸಿದರು. ಶೌರ್ಯ ವಿಪತ್ತು ವಿಭಾಗದ ಯೋಜನಾಧಿಕಾರಿ ಜಯವಂತ ಪಟಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಲ್ವಿಚಾರಕಿ ಸರಿತಾ.ವಿಟ್ಲ ತಾಲೂಕಿನ ಶೌರ್ಯ ತಂಡದ ಸಾಧನೆ ಮಂಡಿಸಿದರು. ಮೇಲ್ವಿಚಾರಕ ಗಂಗಾಧರ ವಂದಿಸಿದರು. ವಿಟ್ಲ ತಾಲೂಕು ಕೃಷಿ ಅಧಿಕಾರಿ ಚಿದಾನಂದ ಕಾರ್ಯಕ್ರಮ ನಿರ್ವಹಿಸಿದರು.