ಪುತ್ತೂರು: ಮುಂಡೂರು ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಬಿಜೆಪಿ ಬೆಂಬಲಿತ ಚಂದ್ರಶೇಖರ್ ಎನ್.ಎಸ್.ಡಿ., ಉಪಾಧ್ಯಕ್ಷರಾಗಿ ಯಶೋಧ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಚಂದ್ರಶೇಖರ್ ಎನ್.ಎಸ್.ಡಿ. ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕಮಲೇಶ್ ಸರ್ವೆದೋಳಗುತ್ತು ನಾಮಪತ್ರ ಸಲ್ಲಿಸಿದ್ದರು.
ಅಂತಿಮವಾಗಿ ಚಂದ್ರಶೇಖರ್ ಎನ್.ಎಸ್.ಡಿ. 12 ಮತಗಳನ್ನು ಪಡೆದು ಆಯ್ಕೆಯಾದರು.