ಮಾಣಿಲ : ಪ್ರತಿಭೆಯನ್ನು ಬಳಸಿಕೊಳ್ಳುವುದರಲ್ಲಿ ಯಶಸ್ಸು ಅಡಗಿದೆ ಎಂದು ಖ್ಯಾತ ನಿರೂಪಕ , ಹಿನ್ನೆಲೆ ಧ್ವನಿ ಕಲಾವಿದ, ನಟ ಬಡೆಕ್ಕಿಲ ಪ್ರದೀಪ್ ಹೇಳಿದರು.
ಮಾಣಿಲ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ಹಾಗೂ 10ನೇ ತರಗತಿ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿ, ಸ್ವಾತಂತ್ರ್ಯೋತ್ತರ ಭಾರತದ ಸಾಧನೆಗಳು , ವ್ಯಕ್ತಿತ್ವ ನಿರ್ಮಾಣ ಹೀಗೆ ವಿವಿಧ ವಿಚಾರಗಳ ಬಗ್ಗೆ ಮಾತನಾಡಿದರು.
ಎಸ್ ಡಿ ಎಂ ಸಿ ಅಧ್ಯಕ್ಷ ಶಿವಪ್ರಸಾದ್ ಸೊರಂಪಳ್ಳ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ 2022- 23ನೇ ಸಾಲಿನಲ್ಲಿ ಅತ್ಯುತ್ತಮ ಶ್ರೇಣಿ ಗಳಿಸಿದ ಹಾಗೂ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಮರಣಿಕೆ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಕನ್ನಡ ಭಾಷಾ ವಿಷಯದಲ್ಲಿ ಪೂರ್ಣ ಅಂಕ ಪಡೆದ 6 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಗ್ರಾ ಪಂ ಉಪಾಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ಸ್ಥಳದಾನಿಗಳೂ ಹಿರಿಯರೂ ಆದ ನಡುಮನೆ ಮಹಾಬಲ ಭಟ್, ಗ್ರಾ ಪಂ ಸದಸ್ಯ ಶೀಧರ್ ಬಾಳೆಕಲ್ಲು ಸಂದೇಶ ನೀಡಿದರು. ಗ್ರಾ ಪಂ ಅಧ್ಯಕ್ಷೆ ವನಿತಾ, ನಿವೃತ್ತ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್ ಕೆ.ಜಿ , ಅನಂತ ಭಟ್, , ಗ್ರಾ.ಪಂ ಸದಸ್ಯ ವಿಷ್ಣು ಕೊಮ್ಮುಂಜೆ, ಎಸ್ ಡಿ ಎಂ ಸಿ ಸದಸ್ಯ ವಿಷ್ಣು ಕನ್ನಡಗುಳಿ, ಹಿರಿಯ ಶಿಕ್ಷಕಿ ಲತಾ ಯು ಭಾಗವಹಿಸಿದ್ದರು. ಮುಖ್ಯ ಶಿಕ್ಷಕ ಭುವನೇಶ್ವರ್ ಸಿ ಸ್ವಾಗತಿಸಿದರು. ಶಿಕ್ಷಕ ಸುಧೀಶ್ ಕೆ ಕಾರ್ಯಕ್ರಮ ನಿರೂಪಿಸಿದರು. ದೈ. ಶಿ. ಶಿಕ್ಷಕ ಉಮಾನಾಥ ರೈ ಮೇರಾವು ವಂದಿಸಿದರು.