ಪುತ್ತೂರು: ಕರ್ನಾಟಕ ಕಾರ್ಮಿಕ ಸಂಘಗಳ ಒಕ್ಕೂಟದ ವತಿಯಿಂದ 77ನೇ ಸ್ವಾತಂತ್ರ್ಯೋತ್ಸವ ಇಲ್ಲಿಯ ಅನುರಾಗ ವಠಾರದಲ್ಲಿ ನಡೆಯಿತು.
ಹಿರಿಯ ವಕೀಲ ಬಿ ಪುರಂದರ ಭಟ್ ಅವರ ನೇತೃತ್ವದಲ್ಲಿ ದ.ಕ. ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ, ದ.ಕ.ಕರ್ನಾಟಕ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕರ ಸಂಘ, ಪುತ್ತೂರು ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘ, ಚೈತನ್ಯ ಸ್ವ ಸಹಾಯ ಸಂಘ, ವಿಕಾಸ ಸ್ವ ಸಹಾಯ ಸಂಘ, ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ಇವುಗಳ ಸಹಯೋಗದೊಂದಿಗೆ ಸ್ವಾತಂತ್ರ್ಯ ಉತ್ಸವವನ್ನು ಆಚರಿಸಲಾಯಿತು..
ಸಂತ ವಿಕ್ಟರ್ಸ್ ಶಾಲಾ ವಿದ್ಯಾರ್ಥಿ ಲಿಖಿತ್ ಧ್ವಜಾರೋಹಣ ನೆರವೇರಿಸಿದರು.
ಕರ್ನಾಟಕ ಕಾರ್ಮಿಕ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಬಿ ಪುರಂದರ ಭಟ್ ಸ್ವಾತಂತ್ರ್ಯ ಉತ್ಸವದ ಸಂದೇಶ ನೀಡಿ, ಸ್ವಾತಂತ್ರ್ಯ ಅನ್ನುವುದೊಂದು ಧಾರ್ಮಿಕ ಮೌಲ್ಯ, ತಾಯಿ ಹೆರುವಾಗ ಕರುಳ ಬಳ್ಳಿಯನ್ನು ಕತ್ತರಿಸಿ ಸ್ವತಂತ್ರವಾಗಿ ಬಾಳಿ ಬದುಕು ಕಂದ ಅಂತ ಹರಸಿ ಶಿಶುವನ್ನು ನೆಲಕ್ಕಿಳಿಸುತ್ತಾಳೆ. ಅಲ್ಲಿಂದ ಪ್ರಾರಂಭವಾಗುತ್ತದೆ ಮನುಷ್ಯ ವ್ಯಕ್ತಿಯ ಸ್ವಾತಂತ್ರ ಧರ್ಮ ಎಂದರು.
ಈ ಸಂದರ್ಭದಲ್ಲಿ ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಸಲಹೆಗಾರ ಎಮ್ ಶೇಷಪ್ಪ ಕುಲಾಲ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಪೂಜಾರಿ ಮುಕ್ವೆ, ಉಪಾಧ್ಯಕ್ಷ ಈಶ್ವರ ನಾಯ್ಕ ಅಜಲಾಡಿ, ಎಂ. ಮೋಹನ ಆಚಾರ್ಯ ಪುರುಷರಕಟ್ಟೆ, ಜೊತೆ ಕಾರ್ಯದರ್ಶಿಗಳಾದ ವಿಶ್ವನಾಥ ಗೌಡ ಬೆಳ್ಳಿಪ್ಪಾಡಿ, ಚೆನ್ನಪ್ಪ ಮಚ್ಚಿಮಲೆ, ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ರೈ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಪುತ್ತು, ಸಲಹೆಗಾರ ಗಿರೀಶ್ ನಾಯ್ಕ ಸೊರಕೆ, ಉಪಾಧ್ಯಕ್ಷರಾದ ನಾರಾಯಣ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ, ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ಮತ್ತು ಕರ್ನಾಟಕ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕರ ಸಂಘದ ಅಧ್ಯಕ್ಷರಾದ ಕೆ ಜಯರಾಂ ಕುಲಾಲ್ ಸ್ವಾಗತಿಸಿ, ಸಲಹೆಗಾರ ಗಿರೀಶ್ ನಾಯ್ಕ ಸೊರಕೆ ವಂದಿಸಿದರು. ತೇಜಕುಮಾರ್ ಎನ್ ಕಾರ್ಯಕ್ರಮ ನಿರ್ವಹಿಸಿದರು.