ಸವಣೂರು : ಸವಣೂರು ವಿದ್ಯಾರಶ್ಮಿ ವಿದ್ಯಾಲಯದ 12ನೇ ವರ್ಷದ ಸ್ಥಾಪಕರ ದಿನಾಚರಣೆ “ಶೀಂಟೂರು ಸ್ಮೃತಿ-2023” ಸೋಮವಾರ ಸವಣೂರು ವಿದ್ಯಾಗಂಗೋತ್ರಿಯ ವಿದ್ಯಾಚೇತನ ಸಭಾಂಗಣದಲ್ಲಿ ನಡೆಯಿತು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಂಬಯಿಯ ಹೇರಂಭ ಇಂಡಸ್ಟ್ರೀಸ್ ಅಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ಇಂಡಿಯನ್ ನೇವಿ ಚೀಫ್ ಇಲೆಕ್ಟಿಕಲ್ ಆರ್ಟಿಫಿಶರ್ ರೆಡಿಯೋ ಚಿಯರ್ (ನಿವೃತ್ತ) ವಿಕ್ರಂ ದತ್ತರಿಗೆ ಶೀಂಟೂರು ಸನ್ಮಾನ ಮಾಡಿದರು. ಮಂಗಳೂರು ಕಾಲೇಜ್ ಆಫ್ ಫಿಷರೀಸ್ ನ ನಿವೃತ್ತ ಡೈರೆಕ್ಟರ್ ಆಫ್ ಇನ್ಸ್‌ಕ್ಷನ್ ಪ್ರೊ. ಡಾ. ಡಿ.ಎಸ್. ಶೇಷಪ್ಪ ಶೀಂಟೂರು ಸಂಸ್ಕರಣೆ ಮಾಡಿದರು. ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ದುಬೈ ಕ್ಷರಿಯತ್ ಅಲ್ ಶಮ್ಸ್ ಬಿಲ್ಡಿಂಗ್ ಕನ್ನಕ್ಕಿಂಗ್ ಎಲ್.ಎಲ್.ಸಿ. ಮೇನೇಜಿಂಗ್ ಡೈರೆಕ್ಟರ್ ಅಶ್ರಫ್ ಮಾಂತೂರು ಅತಿಥಿಗಳಾಗಿ ಭಾಗವಹಿಸಿದ್ದರು.
ಎಸ್.ಎನ್.ಆರ್. ರೂರಲ್ ಎಜ್ಯುಕೇಶನ್ ಟ್ರಸ್ಟ್‌ನ ವಿಶ್ವಸ್ಥರಾದ ಎನ್. ಸುಂದರ ರೈ ಸವಣೂರು ಮತ್ತು ಸವಣೂರು ವಿದ್ಯಾರಶ್ಮಿ ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಇಂ. ಅಶ್ವಿನ್ ಎಲ್. ಶೆಟ್ಟಿ ಗೌರವ ಉಪಸ್ಥಿತರಾಗಿ ಮತ್ತು ಟ್ರಸ್ಟಿ ಶ್ರೀಮತಿ ರಶ್ಮಿ ಅಶ್ವಿನ್ ಶೆಟ್ಟಿ, ನ್ಯಾಯವಾದಿ ಎನ್. ಜಯಪ್ರಕಾಶ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ತಂದೆಯವರು ತೋರಿಸಿಕೊಟ್ಟ ಹಾದಿಯಲ್ಲಿ ಮುನ್ನಡೆದು, ಅವರ ಕನಸಿನ ವಿದ್ಯಾಸಂಸ್ಥೆಗಳನ್ನು ಬೆಳೆಸಿಕೊಂಡು ಬಂದಿದ್ದೇವೆ. ಅವರ ಆದರ್ಶಗಳನ್ನು ಮುಂದಿನ ಜನಾಂಗಕ್ಕೆ ತಿಳಿಯಪಡಿಸುವ ಉದ್ದೇಶದಿಂದ ಅವರನ್ನು ನೆನಪಿಸಿಕೊಳ್ಳುವುದು ಮಕ್ಕಳಾದ ನಮ್ಮ ಕರ್ತವ್ಯ ಎನ್ನುವ ನೆಲೆಯಲ್ಲಿ ಶೀಂಟೂರು ಸ್ಮೃತಿ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದೇವೆ ಎಂದರು.
ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲರಾದ ಸೀತಾರಾಮ ಕೇವಳ ಕಾರ್ಯಕ್ರಮ ನಿರೂಪಿಸಿದರು. ನ್ಯಾಯವಾದಿ ಎನ್. ಜಯಪ್ರಕಾಶ್ ರೈ ವಂದಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು . ಕು. ವೈಷ್ಣವಿ ನಾಲ್ನುಡಿ ಹೇಳಿದರು. ವಿದ್ಯಾರ್ಥಿನಿ ಕು. ಸ್ಪರ್ಶ ಜೆ. ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಸಂಸ್ಥೆಯ ಪ್ರಾಂಶುಪಾಲರು, ಉಪನ್ಯಾಸ ವೃಂದ, ಬೋಧಕೇತರ ಸಿಬ್ಬಂದಿ, ಎಸ್. ಎನ್.ಆರ್. ರೂರಲ್ ಎಜ್ಯುಕೇಶನ್ ಟ್ರಸ್ಟ್‌ನ ಟ್ರಸ್ಟಿಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.