ಮಂಗಳೂರು : ದ.ಕ ಭೌತಶಾಸ್ತ್ರ ಉಪನ್ಯಾಸಕರ ಶೈಕ್ಷಣಿಕ ಕಾರ್ಯಾಗಾರ ಸರಕಾರಿ ಬಾಲಕಿಯರ ಪಿ.ಯು ಕಾಲೇಜು ಬಲ್ಮಠದಲ್ಲಿ ನಡೆಯಿತು.
ದ.ಕ ಜಿಲ್ಲಾ ಪ.ಪೂ. ಕಾಲೇಜುಗಳ ಭೌತಶಾಸ್ತ್ರ ಉಪನ್ಯಾಸಕರ ಸಂಘ, ಪ್ರಾಚಾರ್ಯರ ಸಂಘ(ರಿ) ಮತ್ತು ಸರಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜು, ಬಲ್ಮಠ ಮಂಗಳೂರು ಇದರ ಜಂಟಿ ಸಹಯೋಗದಲ್ಲಿ ಪ್ರತಿ ವರ್ಷದಂತೆ ಈ ವರುಷವು ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿ ಡಿ ಜಯಣ್ಣ ಮಾನ್ಯ ಉಪನಿರ್ದೇಶಕರು ಇವರು ಭೌತಶಾಸ್ತ್ರದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಶುಭ ಹಾರೈಸುವ ಮೂಲಕ ಇಂತಹ ಕಾರ್ಯ ಶ್ಲಾಘನೀಯ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಫೆಬ್ರವರಿಯಲ್ಲಿ ನಿಧಾನರಾದ ಬೆಟ್ಟಂಪಾಡಿ ಕಾಲೇಜಿನ ಭೌತಶಾಸ್ತ್ರಉಪನ್ಯಾಸಕರು ಆಗಿದ್ದ ಮಹೇಶ್ ಅವರ ಕಾರ್ಯವನ್ನು ನೆನಪಿಸುತ್ತ ಒಂದು ನಿಮಿಷಗಳ ಕಾಲ ಮೌನ ಪ್ರಾರ್ಥನೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ ಎನ್ ಗಂಗಾಧರ ಆಳ್ವ ಅಧ್ಯಕ್ಷರು, ದ ಕ ಜಿಲ್ಲಾ ಪ ಪೂ ಕಾಲೇಜುಗಳ ಪ್ರಾಚಾರ್ಯರ ಸಂಘ ಮಂಗಳೂರು, ವಿಶೇಷ ಉಪನ್ಯಾಸಕರು ಪ್ರೊ: ಎಂ ರಮೇಶ್ ಭಟ್ ಪ್ರಾಚಾರ್ಯರು ಮಹಾವೀರ ಪ ಪೂ ಕಾಲೇಜು ಮೂಡಬಿದರೆ ಹಾಗೂ ಮುಖ್ಯ ಅತಿಥಿಗಳಾಗಿ ಶ್ರೀ ಆನಂದ. ಪಿ ಸಹಾಯಕ ನಿರ್ದೇಶಕರು ಬೆಂಗಳೂರು, ಶ್ರೀಮತಿ ವನಿತಾ ದೇವಾಡಿಗ ಪ್ರಾಚಾರ್ಯರು ಪ ಪೂ ಕಾಲೇಜು ಬಲ್ಮಠ, ಶ್ರೀ ಉಮೇಶ್ ಕೆ ಆರ್ ಅಧ್ಯಕ್ಷರು ಭೌತಶಾಸ್ತ್ರ ಉಪನ್ಯಾಸಕರ ಸಂಘ ಮಂಗಳೂರು ಮತ್ತು ಮಂಗಳೂರು ಕಿಟ್ಟೆಲ್ ಪದವಿಪೂರ್ವ ಕಾಲೇಜಿನ ವಿಠ್ಠಲ ಪಾಲ್ಗೊಂಡಿದ್ದರು.ಹಳೆಯಂಗಡಿ ಉಪಾನ್ಯಾಸಕ ದಿನಕರ್ ಕಾರ್ಯಕ್ರಮ ನಿರೂಪಿಸಿದರು.