ಪುತ್ತೂರು : ತಿಂಗಳಾಡಿ ಬಾಲಯ ಕಂಬಳ ತಂಡ, ಸುಳ್ಯ ಅಮರ ಸಂಘಟನಾ ಸಮಿತಿ, ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಹಾಗೂ ಪಾಲ್ತಾಡಿ ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ಸಹಕಾರದೊಂದಿಗೆ ಸಾರಾಕರೆ ದಿವಂಗತ ಶೀನಪ್ಪ ಪೂಜಾರಿ ಬೊಳಿಯಾಲ ಅವರ 20ನೇ ವರ್ಷದ ಸ್ಮರಣಾರ್ಥ “ಕೆಸರ್‍ಡೊಂಜಿ ದಿನ, ಕಂಬಳ ಉತ್ಸವ ಹಾಗೂ ರಕ್ತದಾನ ಶಿಬಿರ ಆ.13 ಭಾನುವಾರ ಪಾಲ್ತಾಡಿ ಚಾಕೊಟೆತ್ತಡಿ ಧರ್ಮರಸು ಉಳ್ಳಾಕುಲು ದೈವಸ್ಥಾನದ ಗದ್ದೆಯಲ್ಲಿ ನಡೆಯಲಿದೆ ಎಂದು ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ಹಿರಿಯ ಸದಸ್ಯ ದಾಮೋದರ ಪೂಜಾರಿ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಾರಾಕರೆ ಶೀನಪ್ಪ ಪೂಜಾರಿ ಅವರ ಮೊಮ್ಮಗ ಲೋಹಿತ್ ಬಂಗೇರ ಬಾಲಯ ಅವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೆಳಗ್ಗೆ 9 ಗಂಟೆಗೆ ಕ್ರೀಡಾಂಗಣವನ್ನು ದ.ಕ.ಜಿಪಂ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಉದ್ಘಾಟಿಸಲಿದ್ದು, ಬಳಿಕ ನಡೆಯುವ ಸಮಾರಂಭವನ್ನು ಕ್ಯಾಂಪ್ಕೊ ಲಿ. ಮಾಜಿ ಅಧ್ಯಕ್ಷ ರಂಗಮೂರ್ತಿ ಉದ್ಘಾಟಿಸಿ, ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸವಣೂರು ಗ್ರಾಪಂ ಅಧ್ಯಕ್ಷೆ ಕೆ.ವಿ.ರಾಜೀವಿ ಶೆಟ್ಟಿ, ಬೆಳ್ಳಾರೆ ಠಾಣಾ ಉಪನಿರೀಕ್ಷಕ ಸುಹಾಸ್, ವಿಹಿಂಪ ದಕ್ಷಿಣ ಕನ್ನಡ ಪ್ರಮುಖ್ ಮುರಳೀಕೃಷ್ಣ ಹಸಂತಡ್ಕ, ಮಾಡ ಉಳ್ಳಾಕುಲು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಂಜೀವ ಗೌಡ, ಪಾಲ್ತಾಡಿ ಗ್ರಾಪಂ ಮಾಜಿ ಅಧ್ಯಕ್ಷ ಕಿಟ್ಟಣ್ಣ ರೈ ನಡುಕೂಟೇಲ್, ಪಾಲ್ತಾಡಿ ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ತಾರನಾಥ್ ಬೊಳಿಯಾಲ, ಮನೋಜ್ ಕುಮಾರ್ ಮಾಡಾವು, ಪಾಲ್ತಾಡಿ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಜಯರಾಮ ಗೌಡ ದೊಡ್ಡಮನೆ, ಸುಳ್ಯ ಅಮರ ಸಂಘಟನಾ ಸಮಿತಿ ಅಧ್ಯಕ್ಷ ಪ್ರವೀಣ್ ಕುಲಾಲ್ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಸಂಜೆ 5 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಹಿಂದೂ ಮುಖಂಡ ಸತ್ಯಜಿತ್ ಸರತ್ಕಲ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ತೋಟಗಾರಿಕಾ ಇಲಾಖೆ ಹಿರಿಯ ನಿರ್ದೇಶಕಿ ರೇಖಾ, ಕಂಬಳ ಸಮಿತಿ ತೀರ್ಪುಗಾರ, ಕಾಂತಾರ ಚಲನಚಿತ್ರ ನಟ ರಾಜೀವ ರೈ ಎಡ್ತೂರು, ಪುತ್ತಿಲ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ, ಕೊಯಿಲ ಜಾನುವಾರು ತರಬೇತಿ ಕೇಂದ್ರದ ನಿರ್ದೇಶಕ ಡಾ.ಪ್ರಸನ್ನ ಹೆಬ್ಬಾರ್, ಬೆಂಗಳೂರು ಹೈಕೋರ್ಟ್ ನ್ಯಾಯವಾದಿ ಎಂ.ರಾಜಣ್ಣ, ನಳೀಲು ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು, ಕೊಳ್ತಿಗೆ ಪ್ರಾ.ಕೃ. ಪ ಸಹಕಾರಿ ಸಂಘದ ಮಾಜಿ ನಿರ್ದೇಶಕ ದಿವಾಕರ ಬಂಗೇರ, ಸುಳ್ಯ ಅಮರ ಸಂಘಟನಾ ಸಮಿತಿ ಮಾಜಿ ಅಧ್ಯಕ್ಷ ಎಂ. ಆರ್..ರಜನಿಕಾಂತ್ ಉಮ್ಮಡ್ಕ, ರಾಷ್ಟ್ರೀಯ ಕ್ರೀಡಾಪಟು ಅಶ್ವತ್ಥ್ ಕಣಿಯಾರು, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕೆಡೆಂಜಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದ ಅಂಗವಾಗಿ ವಿಶೇಷವಾಗಿ ಕಂಬಳ ಸ್ಪರ್ಧಾಕೂಟದ ನಡೆಯಲಿದ್ದು, ಸುಮಾರು 20 ಜೋಡಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅಲ್ಲದೆ ಪುರುಷರಿಗೆ ವಾಲಿಬಾಲ್, ಹಗ್ಗಜಗ್ಗಾಟ, ಕಬಡ್ಡಿ, ಮಹಿಳೆಯರಿಗೆ ಹಗ್ಗಜಗ್ಗಾಟ, ಕೆಸರುಗದ್ದೆ ಓಟ, ಮಡಕೆ ಒಡೆಯುವುದು, ಮಕ್ಕಳಿಗೆ ಹಿಮ್ಮುಖ ಓಟ, ಕೆಸರುಗದ್ದೆ ಓಟ, ಹಾಳೆ ಎಳೆತ, ಡೊಂಕ ಓಟ, ನಿಧಿ ಶೋಧನೆ, ಬುಗರಿ ಓಟ ನಡೆಯಲಿದೆ ಅಲ್ಲದೆ ನಿವೃತ್ತ ದೈಹಿಕ ಶಿಕ್ಷಕ ಸುರೇಶ್ ಕುಮಾರ್ ದೊಡ್ಡಮನೆ, ಕಂಬಳ ಮುಖ್ಯ ತೀರ್ಪುಗಾರ ವಿಜಯ ಕುಮಾರ್ ಕಂಗಿನಮನೆ, ಚಿನ್ನದ ಪದಕ ಪುರಸ್ಕೃತ ಪೊಲೀಸ್ ಇಲಾಖೆಯ ಪ್ರವೀಣ್ ರೈ ನಡುಕೂಟೇಲು ಹಾಗೂ ಕಂಬಳ ತೀರ್ಪುಗಾರ ನಿರಂಜನ್ ರೈ ಅವರನ್ನು ಸನ್ಮಾನಿಸಲಾಗುವುದು ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮ ನೇತೃತ್ವ ವಹಿಸುವ ಲೋಹಿತ್ ಬಂಗೇರ ಬಾಲಯ, ರೋಶನ್ ಬಂಗೇರ ಬಾಲಯ, ಪಾಲ್ತಾಡಿ ಉಳ್ಳಾಕುಲು ಫ್ರೆಂಡ್ಸ್ ಕ್ಲಬ್‍ಅಧ್ಯಕ್ಷ ತಾರನಾಥ ಬೊಳಿಯಾಲ, ರವೀಂದ್ರ ಪೂಜಾರಿ ಮರಕ್ಕೂರು ಉಪಸ್ಥಿತರಿದ್ದರು.