ಕಾಣಿಯೂರು: ಕಾಣಿಯೂರು, ದೋಳ್ಪಾಡಿ, ಚಾರ್ವಾಕ ಹಾಗೂ ಪುಣ್ಚತ್ತಾರು ಸೌಜನ್ಯ ಪರ ನ್ಯಾಯಕ್ಕಾಗಿ ಸಮಾನ ಮನಸ್ಕರ ಹೋರಾಟ ಸಮಿತಿ ವತಿಯಿಂದ ಶಾಂತಿಯುತ ಮೌನ ಪ್ರತಿಭಟನೆ ಶನಿವಾರ ಬೆಳಿಗ್ಗೆ ಕಾಣಿಯೂರಿನಲ್ಲಿ ನಡೆಯಿತು.
ಸೌಜನ್ಯ ಹತ್ಯೆ ಪ್ರಕರಣದ ನೈಜ ಆರೋಪಿಗಳ ಪತ್ತೆಗಾಗಿ ಮರು ತನಿಖೆ ನಡೆಯಲಿ ಎಂಬ ಘೋಷಣೆಯೊಂದಿಗೆ ಫಲಕಗಳನ್ನು ಹಿಡಿದು ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಪ್ರತಿಭಟನೆಯನ್ನುದ್ದೇಶಿಸಿ ಪದ್ಮಯ್ಯ ಗೌಡ ಅನಿಲ, ಧರ್ಮೇಂದ್ರ ಕಟ್ಟತ್ತಾರು, ಪರಮೇಶ್ವರ ಅನಿಲ, ಧನಂಜಯ ಕೇನಾಜೆ, ಧರ್ಮಪಾಲ ರೈ ದೋಳ್ಪಾಡಿ, ರಾಮಣ್ಣ ಗೌಡ, ಪ್ರಮೀಳಾ ಜನಾರ್ಧನ್, ಪುಷ್ಪಾವತಿ ಕಳುವಾಜೆ, ನಾಗವೇಣಿ ಕಾಣಿಯೂರು, ರವಿಶಂಕರ್, ರಾಮಣ್ಣ ಮುಗೆರಂಜ, ಗಣೇಶ್ ಉದನಡ್ಕ ಭಾಗವಹಿಸಿ ಮಾತನಾಡಿದರು.