ಆ.14 ಪುತ್ತೂರಿನಲ್ಲಿ ಸೌಜನ್ಯ ನ್ಯಾಯಕ್ಕಾಗಿ ಹೋರಾಟ : ಪುತ್ತಿಲ ಪರಿವಾರದಿಂದ  ಸೌಜನ್ಯ ತಾಯಿಗೆ ಮೊದಲ ಆಮಂತ್ರಣ

ಪುತ್ತೂರು: 2012ರಲ್ಲಿ ಅತ್ಯಾಚಾರವಾಗಿ ಕೊಲೆಯಾದ ಸೌಜನ್ಯ ಪ್ರಕರಣವನ್ನು ಮರುತನಿಖೆ ನಡೆಸಬೇಕೆಂದು ಪುತ್ತೂರಿನಲ್ಲಿ ಆಗಸ್ಟ್ 14 ರಂದು ಪುತ್ತಿಲ ಪರಿವಾರದ ವತಿಯಿಂದ ಪಾದಯಾತ್ರೆ ಹಾಗೂ ರಸ್ತೆ ತಡೆ ನಡೆಯಲಿದ್ದು, ಮೊದಲ ಆಮಂತ್ರಣ ಪತ್ರವನ್ನು ಸೌಜನ್ಯ ತಾಯಿ ಕುಸುಮಾವತಿ ಅವರಿಗೆ ನೀಡಲಾಯಿತು.

ಈ ಹೋರಾಟಕ್ಕೆ ಸೌಜನ್ಯ ತಾಯಿ ಕುಸುಮಾವತಿಯವರನ್ನು ಪುತ್ತಿಲ ಪರಿವಾರದ ವತಿಯಿಂದ ಆಹ್ವಾನಿಸಿದರು. ಸೌಜನ್ಯ ಸಮಾಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ತಾಯಿಗೆ ಮೊದಲ ಆಮಂತ್ರಣ ನೀಡಲಾಯಿತು.

ಪುತ್ತಿಲ ಪರಿವಾರದ ಪ್ರಧಾನ ಕಾರ್ಯದರ್ಶಿ ಉಮೇಶ್ ವೀರಮಂಗಲ ಆಮಂತ್ರಣ ನೀಡಿದರು ಈ ಸಂದರ್ಭ ನಗರ ಅಧ್ಯಕ್ಷರಾದ ಅನಿಲ್ ತೆಂಕಿಲ, ಮನೀಶ್ , ಶನ್ಮಿತ್ ರೈ, ಶರತ್ ವಿಟ್ಲ ಮೊದಲಾದವರು ಹಾಜರಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top